ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಈದ್ ಮಿಲಾದ್ ಹಬ್ಬದ ಮೆರವಣಿಗೆ ನಿಮಿತ್ತ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಅ. 9 ರಂದು ಬೆಳಗಾವಿ ನಗರದ ವಿವಿಧ ಮಾರ್ಗಗಳ ಸಂಚಾರವನ್ನು ಬದಲಾವಣೆ ಮಾಡಿ ಬೆಳಗಾವಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಈದ್-ಇ-ಮಿಲಾದ ಹಬ್ಬದ ಮೆರವಣಿಗೆಯು ಪಿಂಪಳಕಟ್ಟಾ ಹತ್ತಿರ ಪ್ರಾರಂಭವಾಗಿ ದೇಶಪಾಂಡೆ ಪಂಪ್, ಫೋರ್ಟ ರೋಡ್ ನೋ ಎಂಟ್ರಿ, ಮುಜಾವರ ಬೂಟ್, ಕೇಂದ್ರ ಬಸ್ ನಿಲ್ದಾಣ ಸರ್ಕಲ್, ಸಂಗೋಳ್ಳಿ ರಾಯಣ್ಣ ಸರ್ಕಲ್, ಡಿಸಿ ಆಫೀಸ್ ಗೇಟ್, ಚೆನ್ನಮ್ಮಾ ಸರ್ಕಲ್, ಕಾಲೇಜ ರೋಡ, ಎನ್.ಡಿ.ಬೂಟ್, ಬೋಗಾರವೇಸ್ ಸರ್ಕಲ್, ಮಂಗಸೂಳೆ ಖೂಟ್, ಫಿಶ್ ಮಾರ್ಕೇಟ್, ಗ್ಲೋಬ್ ಸರ್ಕಲ್, ಕ್ಯಾಂಪದಲ್ಲಿರುವ ಅಸದಖಾನ ದರ್ಗಾದಲ್ಲಿ ಮುಕ್ತಾಯಗೊಳ್ಳಲಿದೆ.
ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಹಿನ್ನೆಲೆಯಲ್ಲಿ ಅ.9 ರಂದು ಬೆಳಗ್ಗೆ 08 ಗಂಟೆಯಿಂದ ಸಂಜೆ ಮೆರವಣಿಗೆ ಮುಕ್ತಾಯದವರೆಗೆ ಈ ಕೆಳಗಿನಂತೆ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಲು ಕೋರಲಾಗಿದೆ.
1) ಸಂಕೇಶ್ವರ, ಚಿಕ್ಕೋಡಿ, ಕೊಲ್ಲಾಪೂರ ಕಡೆಯಿಂದ ಚೆನ್ನಮ್ಮ ಸರ್ಕಲ್ ಮೂಲಕ ಗೋವಾ ರಾಜ್ಯದ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳ ಚಾಲಕ ಸವಾರರು ಬಾಕ್ಸೈಟ್ ರೋಡ್ ಮೂಲಕ ಹಿಂಡಲಗಾ ಫಾರೆಸ್ಟ್ ನಾಕಾದಿಂದ ಎಡ ತಿರುವು ಪಡೆದು ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ (ಮಿಲಿಟರಿ ಆಸ್ಪತ್ರೆ ಸರ್ಕಲ್), ಕೇಂದ್ರೀಯ ವಿದ್ಯಾಲಯ ನಂ.2, ಶರ್ಕತ ಪಾರ್ಕ್ , ಗವಳಿಗಲ್ಲಿ ಕ್ರಾಸ್, ಸೇಂಟ್ ಪಾಲ್ ಸ್ಕೂಲ್ ಹಿಂದಿನ ರಸ್ತೆ, ಮಿಲಿಟರಿ ಮಹಾದೇವ ಮಂದಿರ ಹತ್ತಿರ ಕಾಂಗ್ರೆಸ್ ರೋಡ ಮೂಲಕ ಖಾನಾಪೂರ ರಸ್ತೆಗೆ ಸೇರಿ ಮುಂದೆ ಸಾಗುವುದು.
2) ಖಾನಾಪೂರ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರಿ ಸಂಕೇಶ್ವರ, ಚಿಕ್ಕೋಡಿ, ಕೊಲ್ಲಾಪೂರ ಸಾಗುವ ಎಲ್ಲ ಮಾದರಿಯ ವಾಹನಗಳ ಚಾಲಕರು, ಸವಾರರು 3ನೇ ರೇಲ್ವೆ ಗೇಟ, ಕಾಂಗ್ರೇಸ್ ರಸ್ತೆ, ಮಿಲಿಟರಿ ಮಹಾದೇವ ಮಂದಿರದಿಂದ ಎಡತಿರುವು ಪಡೆದುಕೊಂಡು ಶರ್ಕತ್ ಪಾರ್ಕ ಕೇಂದ್ರೀಯ ವಿದ್ಯಾಲಯ ನಂ.2, ಶೌರ್ಯ ಚೌಕ (ಮಿಲಿಟರಿ ಆಸ್ಪತ್ರೆ ಸರ್ಕಲ್).ಗಾಂಧಿ ಸರ್ಕಲ್ (ಅರಗನ ತಲಾಬ)ದಲ್ಲಿ ಎಡವಿರುವ ಪಡೆದುಕೊಂಡು ಗಣೇಶ ಮಂದಿರ ಹಿಂಡಲಗಾ ರಸ್ತೆ, ಡಂಬಲ್ ರೋಡ್ ಮೂಲಕ, ಬಾಕ್ಸೈಟ್ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ಸೇರಿ ಮುಂದೆ ಸಾಗುವುದು.
3) ಖಾನಾಪೂರ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರಿ ಗೋಕಾಕ, ಯರಗಟ್ಟ, ಧಾರವಾಡ ಕಡೆಗೆ ಸಾಗುವ ಎಲ್ಲ ಮಾದರಿಯ ವಾಹನಗಳ ಚಾಲಕ/ಸವಾರರು 3ನೇ ರೇಲ್ವೆ ಗೇಟ, ಅನಗೋಳ ನಾಕಾ, ಆರ್‌ಪಿಡಿ ಸರ್ಕಲ್ , ಗೋವಾವೇಸ್ ಸರ್ಕಲದಿಂದ ಮಹಾತ್ಮಾ ಫುಲೆ ರಸ್ತೆಯ ಮುಖಾಂತರ ಬ್ಯಾಂಕ ಆಫ್ ಇಂಡಿಯಾ ಹೊಸ ರಸ್ತೆಯ ಮೂಲಕ ಹಳೆ ಪಿವಿ ರೋಡ್ ಯಡಿಯೂರಪ್ಪ ಮಾರ್ಗವಾಗಿ ಅಲಾರವಾಡ ಬ್ರಿಡ್ಜ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸೇರಿ ಮುಂದೆ ಸಾಗುವುದು.
4) ಗೋಕಾಕ, ಯರಗಟ್ಟಿ, ಧಾರವಾಡ ಕಡೆಯಿಂದ ಗೋವಾ ರಾಜ್ಯದ ಕಡೆಗೆ ಸಂಚರಿಸುವ ಎಲ್ಲ. ಮಾದರಿಯ ವಾಹನಗಳ ಚಾಲಕ ಸವಾರರು ಅಲಾರವಾಡ ಅಂಡ ಬ್ರೆಡ್ ಮೂಲಕ ತಿರುವು ಪಡೆದು ಹಳೆ ಪಿಬಿ ರೋಡ್ ಮೂಲಕ ಹೊಸೂರ ಪಿಂಪಳಕಟ್ಟಾ ಮುಂದೆ ಎಡ ತಿರುವು ಪಡೆದುಕೊಂಡು ಬ್ಯಾಂಕ್ ಆಪ್ ಇಂಡಿಯಾ ಡಬಲ್ ರೋಡ್ ಮೂಲಕ ಗೋವಾವೆಸ್ ಸರ್ಕಲದಿಂದ ಸಾಗುವುದು.
ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಕರೆ; ಎಂಜಿನಿಯರ್ ಅರೆಸ್ಟ್
https://pragati.taskdun.com/latest/vidhanasoudhabomb-threataccused-arrest/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ