ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊಲೆಗೆ ಸಂಚುರೂಪಿಸುತ್ತಿದ್ದ ನಟೋರಿಯಸ್ ರೌಡಿ ಗ್ಯಾಂಗ್ ನ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಂಧಿತರನ್ನು ಸೋಮ ಕಾಡುಬೀಸನಹಳ್ಳಿ, ಆತನ ಸಹಚರರಾದ ಮಧು, ಸುಮಂತ್ ಮತ್ತು ಮುನಿಯಲ್ಲಪ್ಪ ಬಂಧಿತರು. ರೌಡಿ ಶೀಟರ್ ರೋಹಿತ್ ನನ್ನು ಸೋಮ ಹಾಗೂ ಆತನ ಸಹಚರರು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ರೋಹಿತ್ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಎನ್ನಲಾಗಿದೆ.
ಎಸಿಪಿ ಹೆಚ್.ಎಸ್.ಪರಮೇಶ್ವರ್ ನೇತೃತ್ವದ ತಂಡ ಕಾರ್ಯಾಚಾರಣೆ ನಡೆಸಿ ರೌಡಿ ಗ್ಯಾಂಗ್ ನ್ನು ಬಂಧಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ