*ಮಹಿಳೆಗೆ ನಗ್ನ ಫೋಟೋ ಕಳುಹಿಸಿ ರೌಡಿಶೀಟರ್ ಬೆದರಿಕೆ; ಜೈಲಿನಿಂದಲೇ ಬ್ಲ್ಯಾಕ್ ಮೇಲ್*
ಪ್ರಗತಿವಾಹಿನಿ ಸುದ್ದಿ: ರೌಡಿಶೀಟರ್ ಓರ್ವ ಪರಪ್ಪನ ಅಗ್ರಹಾರ ಜೈಲಿನಿಂದಲೇ ಮಹಿಳೆಯೊಬ್ಬರಿಗೆ ನಗ್ನ ಫೋಟೋ ಕಳುಹಿಸಿ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿ ಬೆದರಿಕೆ ಹಾಕುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ರೌಡಿಶೀಟರ್ ಮನೋಜ್ ಎಂಬಾತ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದು, ಜೈಲಿನಿಂದ ಮಹಿಳೆಯೊಬ್ಬರ ತಾಯಿಗೆ ಬೆತ್ತಲೆ ಫೋಟೋ ಕಳುಹಿಸಿ ನಿನ್ನ ಮಗಳ ಬೆತ್ತಲೆ ಫೋಟೋಗಳನ್ನು ನಿನ್ನ ಅಳಿಯನಿಗೆ ಕಳುಹಿಸಿ ಸಂಸಾರ ಹಾಳು ಮಾಡುತ್ತೇನೆ. ಎಂದು ಬೆದರಿಕೆ ಹಾಕಿ ಹಣ ನೀಡುವಂತೆ ಬ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.
ಈ ಹಿಂದೆಯೂ ರೌಡಿಶೀಟರ್ ಮನೋಜ್ ಇದೇ ರೀತಿ ಬೆದರಿಕೆ ಹಾಕಿ ತನ್ನ ತಾಯಿಯಿಂದ 40,000 ರೂಪಾಯಿ ಹಣ ಪಡೆದಿದ್ದ. ಈಗ 5 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರು ನೀಡಿದ್ದಾರೆ.
ಫೆ.12ರಂದು ಮನು ಅಸೋಸಿಯೇಷನ್ ಕಾರ್ತಿಕ್ ಎಂಬಾತನಿಂದ ಬೆದರಿಕೆ ಕರೆ ಮಾಡಿಸಿದ್ದಾನೆ. ವಾಟ್ಸಪ್ ಹಾಗೂ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಅಲ್ಲದೇ ಜೈಲಿನಿಂದಲೇ ಕರೆ ಮಾಡಿ ಧಮ್ಕಿ ಹಾಕಿದ್ದಾನೆ. ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ಮಹಿಳೆ ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಐಟಿ ಆಕ್ಟ್ 67, ಐಪಿಸಿ ಸೆಕ್ಷನ್ 34 ಮತ್ತು 384ರ ಅಡಿ ಪ್ರಕರಣ ದಾಖಲಾಗಿದೆ. ಯಲಹಂಕ ಪೊಲೀಸರು ಜೈಲಿನಲ್ಲಿರುವ ರೌಡಿ ಶೀಟರ್ ಮನೋಜ್ ನನ್ನು ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆಯಲು ಮುಂದಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ