Latest

ಅವಧೂತ ವಿನಯ್‌ ಗುರೂಜಿ ಅವರಿಂದ ರಾಯಲ್‌ ಎನ್‌ಸ್ಪೋ ವರ್ಲ್ಡ್‌ ಲೋಗೋ ಲೋಕಾರ್ಪಣೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಲ್ಲಾ ವಯೋಮಾನದವರಿಗೂ ಅನುಕೂಲವಾಗುವ 400 ಕ್ಕೂ ಹೆಚ್ಚು ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ನೀಡುವ ರಾಯಲ್‌ ಎನ್‌ಸ್ಪೋ ವರ್ಲ್ಡ್‌ ಥೀಮ್‌ ಪಾರ್ಕ್‌ ನ ಲೋಗೋವನ್ನು ಗೌರಿಗದ್ದೆಯ ಅವಧೂತರಾದ ವಿನಯ್‌ ಗುರೂಜಿ ಅವರು ಲೋಕಾರ್ಪಣೆಗೊಳಿಸಿದರು.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಗೋ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬೆಂಗಳೂರಿನ ಕೆಲವೇ ಕೆಲವು ಕಿಲೋಮೀಟರ್‌ ಗಳ ಹೊರವಲಯದಲ್ಲಿ ನೂರಕ್ಕೂ ಹೆಚ್ಚು ಗ್ರಾಮೀಣ ಕ್ರೀಡೆಗಳು, 20 ಕ್ಕೂ ಹೆಚ್ಚು ಸಾಹಸಾತ್ಮಕ ಕ್ರೀಡೆಗಳು ಹಾಗೂ ಭಾರತೀಯ ಮತ್ತು ವಿದೇಶಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಹೊಂದುವ ಪಾರ್ಕನ್ನು ಶೇಖರ್‌ ಗ್ಲೋಬಲ್‌ ರಿಟ್ರೀಟ್ಸ್‌ ಸಂಸ್ಥೆ ನಿರ್ಮಿಸುತ್ತಿರುವುದು ಬಹಳ ಸಂತಸದ ವಿಷಯವಾಗಿದೆ. ಕ್ರೀಡೆಗಳು ಮಾನವನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಮ್ಮ ಬಾಲ್ಯವನ್ನು ನೆನೆಪಿಸುವಂತಹ ಗ್ರಾಮೀಣ ಕ್ರೀಡೆಗಳ ಜೊತೆಯಲ್ಲಿಯೇ ಕ್ರೀಡಾಂಗಣದ ಆಟಗಳು ಮತ್ತು ಸಾಂಪ್ರದಾಯಿಕ ಸಾಂಸ್ಕೃತಿಕ ಚಟುವಟಿಕೆಗಳು ಒಂದೇ ಸ್ಥಳದಲ್ಲಿ ದೊರಕುವಂತಹ ವ್ಯವಸ್ಥೆ ಬಹಳ ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಹೆಚ್‌ ಜೆ ಶೇಖರ್‌ ಅವರ ಕನಸಿನ ಕೂಸಾಗಿದೆ ಎನ್‌ಸ್ಪೋ ಪಾರ್ಕ್‌. ಈ ಥೀಮ್‌ ಪಾರ್ಕನ್ನು ಎಲ್ಲಾ ವರ್ಗದ ಜನರು ಕೂಡಾ ಉಪಯೋಗಿಸಿ ಇಷ್ಟಪಡುವಂತಾಗಬೇಕು ಎನ್ನುವುದು ನಮ್ಮ ಪ್ರಮುಖ ಗುರಿಯಾಗಿದೆ. 400 ಕ್ಕೂ ಹೆಚ್ಚು ಚಟುವಟಿಕೆಗಳನ್ನು ಹೊಂದಿರುವ ಈ ಪಾರ್ಕ್‌ನಲ್ಲಿ ವಿಆರ್‌ ಗೇಮ್‌ಗಳು, ರಂಗ ಹಾಗೂ ಜಾನಪದ ಚಟುವಟಿಕೆಗಳನ್ನು ಕಾಣಬಹುದಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಶೇಖರ್‌ ತಿಳಿಸಿದರು.

ಇನ್ನು ಕೆಲವೇ ದಿನಗಳಲ್ಲಿ ಈ ಪಾರ್ಕ್‌ ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆ ಗೊಳ್ಳಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button