
ಪ್ರಗತಿವಾಹಿನಿ ಸುದ್ದಿ: 75ವರ್ಷ ಮೇಲ್ಪಟ್ಟವರು ರಾಜಕಾರಣದಿಂದ ನಿವೃತ್ತಿಯಾಗಬೇಕು ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇದೀಗ ಯೂಟರ್ನ್ ಹೊಡೆದಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೋಹನ್ ಭಾಗವತ್, 75ವರ್ಷ ಆದವರು ಯಾರೂ ನಿವೃತ್ತಿಯಾಗಬೇಕಿಲ್ಲ. ನಾನೂ ನಿವೃತ್ತಿಯಾಗಲ್ಲ, ಬೇರೆಯವರನ್ನು ನಿವೃತ್ತಿಯಾಗಿ ಎಂದು ಹೇಳುವುದಿಲ್ಲ. ಎಲ್ಲಿವರೆಗೂ ನಾವು ಇರುತ್ತೇವೆಯೋ ಅಲ್ಲಿಯವರೆಗೂ ಸೇವೆ ಮಾಡುತ್ತೇವೆ ಎಂದು ಹೇಳಿದ್ದಾರೆ.
75ವರ್ಷ ಆದವರು ನಿವೃತ್ತಿಯಾಗಬೇಕು ಎಂದು ನಾನು ಎಂಡೂ ಹೇಳಿಲ್ಲ. ಸಂಘದಲ್ಲಿ ನಮಗೆ ಕೆಲಸ ನೀಡಲಾಗುತ್ತದೆ. ನಾವು ಬಯಸುತ್ತೇವೋ ಇಲ್ಲವೋ, ನನಗೆ 80ವರ್ಷ ಆಗಿದ್ದರೆ ಸಂಘ ಹೋಗಿ ಶಾಖೆ ನಡೆಸು ಎಂದು ನನಗೆ ಹೇಳಿದರೆ ನಾನು ಅದನ್ನು ಮಾಡಬೇಕಾಗುತ್ತದೆ. ಇದು ಯಾರ ನಿವೃತ್ತಿಗಾಗಿ ಅಲ್ಲ. ಸಂಘ ಬಯಸುವವರೆಗೂ ನಾವು ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.