ಸಂತ್ರಸ್ತರ ನೋವು ಆಲಿಸಿದ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಉತ್ತರ ಕರ್ನಾಟಕದಲ್ಲಿ ನದಿಗಳ ಪ್ರವಾಹಕ್ಕೆ ಸಿಲುಕಿ ನೊಂದವರ ಅಳಲು ಆಲಿಸಿ ಅವಶ್ಯಕ ಸಾಮಗ್ರಿಗಳನ್ನು , ಬೆಳಗಾವಿ ಲಾಯನ್ಸಕ್ಲಬ್ ಸಹಭಾಗಿತ್ವದಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಅವರು ವಿತರಿಸಿದರು.
ಬೆಳಗಾವಿಗೆ ಸಮೀಪವಿರುವ ಘೋಡಿಗೇರಿ ಗ್ರಾಮಕ್ಕೆ ಭೇಟಿ ನೀಡಿ ಸತತ ಆರು ದಿನಗಳಿಂದ ಹಿರಣ್ಯಕೇಶಿ ಮತ್ತು ಘಟಪ್ರಭಾ ನೀರಲ್ಲಿ ಮುಳಗಡೆಯಾದ ಜನರ ನೋವನ್ನು ಆಲಿಸಿ ಸಾಂತ್ವನ ಹೇಳಿದರು.
ಬೆಳಗಾವಿ ಜಿಲ್ಲೆಯಾದ್ಯಾಂತ ನೊಂದಜನರ ಸೇವೆಗಾಗಿ ವಿಶ್ವವಿದ್ಯಾಲಯದ ಸಿಬ್ಬಂದಿಯವರ ಒಂದು ದಿನದ ವೇತನ ನೀಡಲು ತೀರ್ಮಾನಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ, ಲಾಯನ್ಸ ಅಧ್ಯಕ್ಷೆ ಭಾರತಿ ವಡವಿ, ಎನ್.ಎಸ್.ಎಸ್. ಸಂಯೋಜಕರಾದ ಪ್ರೊ.ಎಸ್.ಓ.ಹಲಸಗಿ, ಪ್ರೊ.ಚಂದ್ರಕಾಂತ ವಾಘಮೋರೆ ಮುಂತಾದವರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ