Politics

*ನನಗೂ ಸಚಿವನಾಗುವ ಆಸೆಯಿದೆ ಎಂದ ವಿಧಾನಸಭೆ ಉಪಸಭಾಪತಿ*

ಪ್ರಗತಿವಾಹಿನಿ ಸುದ್ದಿ: ನನಗೂ ಸಚಿವನಾಗುವ ಆಸೆಯಿದೆ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

Home add -Advt

ಮೈಸೂರಿನಲ್ಲಿ ಮಾತನಾಡಿದ ಉಪಸಭಾಪತಿ ರುದ್ರಪ್ಪ ಲಮಾಣಿ, ಕಳೆದ ಬಾರಿ ಸಚಿವ ಸಂಪುಟ ರಚನೆ ವೇಳೆ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ ಅಂತಿಮ ಕ್ಷಣದಲ್ಲಿ ಹೆಸರನ್ನು ಬದಲಾಯಿಸಲಾಯಿತು. ಪಕ್ಷದ ನಾಯಕರು ನನ್ನ ಮನವೊಲಿಸಿ ಉಪಸಭಾಪತಿ ಸ್ಥಾನ ನೀಡಿದರು ಎಂದು ಹೇಳಿದರು.

ನಮ್ಮ ಸಮುದಾಯ ನಿರಂತರವಾಗಿ ಕಾಂಗ್ರೆಸ್ ಗೆ ಬೆಂಬಲಿಸುತ್ತಾ ಬಂದಿದೆ. ಹೀಗಾಗಿ ಈ ಬಾರಿ ನನಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲರಿಗೂ ಆಸೆಯಿರುವಂತೆ ನನಗೂ ಸಚಿವನಾಗಬೇಕು ಎಂಬ ಆಸೆಯಿದೆ. ನಾನೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿದ್ದಾರೆ.

Related Articles

Back to top button