
ಪ್ರಗತಿವಾಹಿನಿ ಸುದ್ದಿ; ಉತ್ತರಾಖಂಡ: ಭಾರಿ ಮಳೆಯಿಂದಾಗಿ ರುದ್ರಪ್ರಯಾಗದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, 10 ಜನರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ರುದ್ರಪ್ರಯಾಗದಲ್ಲಿ ಅಂಗಡಿಯ ಬಳಿ ಭೂಕುಸಿತ ಸಂಭವಿಸಿದ್ದು, ಅಂಗಡಿಯ ಮೇಲೆಯೇ ಬೃಹತ್ ಬಂಡೆಗಳು ಕುಸಿದು ಬಿದ್ದಿವೆ. ಮೂರು ಅಂಗಡಿಗಳು ಸಂಪೂರ್ಣ ಹಾನಿಯಾಗಿದ್ದು, ಘಟನೆ ವೇಳೆ 10-12 ಜನರು ಅಂಗಡಿಯಲ್ಲಿದ್ದರು. ಹತ್ತು ಜನರು ನಾಪತ್ತೆಯಾಗಿದ್ದು, ಈವರೆಗೂ ಸುಳಿವು ಸಿಕ್ಕಿಲ್ಲ.
ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ಇದ್ದು, ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ತಂಡ, ಪೊಲೀಸ್ ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ.