Kannada NewsLatest

ಅಪ್ರಾಪ್ತ ಬಾಲಕಿಯನ್ನು ಬಂಧಿಸಿ, 10 ತಿಂಗಳು ಅತ್ಯಾಚಾರ

ಅಪ್ರಾಪ್ತ ಬಾಲಕಿಯನ್ನು ಬಂಧಿಸಿ, 10 ತಿಂಗಳು ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿ – ರಾಂಚಿ : ಅಪ್ರಾಪ್ತ ಬಾಲಕಿಯನ್ನು ಮನೆಯಲ್ಲಿ ಬಂಧಿಸಿ ಹತ್ತು ತಿಂಗಳುಗಳ ಕಾಲ ಅತ್ಯಾಚಾರ ನಡೆಸಿರುವ ಘಟನೆ ಜಾರ್ಕಂಡ್ ನಲ್ಲಿ ಬೆಳಕಿಗೆ ಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ.. ಅಪ್ರಾಪ್ತ ಯುವತಿಯೊಬ್ಬಳು ಕಳೆದ ನವೆಂಬರ್ ತಿಂಗಳಲ್ಲಿ ತನ್ನ ತಾಯಿಯ ಬಳಿ ಜಗಳವಾಡಿ, ಮನೆ ಬಿಟ್ಟು ಬಂದಿದ್ದಾಳೆ. ಮನೆ ಬಿಟ್ಟ ಯುವತಿಗೆ ಎಲ್ಲಿ ಹೋಗಬೇಕೆಂದು ತಿಳಿಯದೆ, ರೈಲಿನಲ್ಲಿ ಜಾರ್ಕಂಡ್ ನ ಹಟಿಯಾ ರೈಲ್ವೆ ನಿಲ್ದಾಣಕ್ಕೆ ಸೇರಿದ್ದಾಳೆ.

ಅದೇ ಪ್ರದೇಶದಲ್ಲಿ ಹೋಟೆಲ್ ನಡೆಸುತ್ತಿದ್ದ “ಭಜರಂಗ್ ಭಾಲಿ ಸಾವೊ” ಎಂಬ ವ್ಯಕ್ತಿಯ ಕಣ್ಣಿಗೆ ಬಿದ್ದ ಈಕೆಯನ್ನು ಮನೆಗೆ ಕರೆದೊಯ್ದು ಮನೆಯ ಕೆಲಸ ಮಾಡಿಸುತ್ತಿದ್ದನು, ಕ್ರಮೇಣ ಭಜರಂಗ್ ಭಾಲಿ ಸಾವೊ ನ ಮಗ ಮುನ್ನಾಕುಮಾರ್ ನಿರಂತರ ಹತ್ತು ತಿಂಗಳು ಈಕೆಯನ್ನು ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ.

ಅವರಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಯುವತಿಯನ್ನು ಭಜರಂಗ್ ಭಾಲಿ ಸಾವೊ ಪತ್ನಿ ತಡೆಯುತ್ತಿದ್ದಳು, ಸರಿಯಾದ ಸಮಯಕ್ಕೆ ಕಾದ ಬಾಲಕಿ, ಅಲ್ಲಿಂದ ಹೊರ ಬಂದು ನೆರೆಯವರ ಮೊಬೈಲ್ ಪಡೆದು ತಂದೆಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾಳೆ.

Home add -Advt

ತಕ್ಷಣ ಬಾಲಕಿಯ ತಂದೆ ರಾಂಚಿಯಲ್ಲಿ ತನ್ನ ಮಗಳನ್ನು ಬಂಧನದಲ್ಲಿ ಇರಿಸಿದ್ದ ಮನೆಗೆ ಬಂದಾಗ, ಭಜರಂಗ್ ಭಾಲಿ ಸಾವೊ ಪತ್ನಿ ಅವರನ್ನು ಮನೆಗೆ ಬರಿಸಿಕೊಳ್ಳುವುದಿಲ್ಲ. ನಂತರ ಪರಿಸ್ಥಿತಿಯನ್ನು ಗಮನಿಸಿ ಬಾಲಕಿಯ ತಂದೆ ರಾಂಚಿ ಪೋಲೀಸರ ಮೊರೆ ಹೋಗಿದ್ದಾರೆ.

ಇನ್ನು ರಂಗಕ್ಕಿಳಿದ ಪೊಲೀಸರು ಬಾಧಿತ ಬಾಲಕಿಯನ್ನು ಅವರಿಂದ ಬಿಡಿಸಿದ್ದಾರೆ, ಬಾಲಕಿ ನೀಡಿದ ದೂರಿನನ್ವಯ, ಭಜರಂಗ್ ಭಾಲಿ ಹಾಗೂ ಅವನ ಮಗ ಮುನ್ನಾ ಕುಮಾರ್ ನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪೋಲೀಸರ ವಿಚಾರಣೆಯಲ್ಲಿ, ಮುನ್ನಾ ಕುಮಾರ್ ಅತ್ಯಾಚಾರವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ತಂದೆ ಮಗನನ್ನು ಕೋರ್ಟ್ ಗೆ ಹಾರು ಪಡಿಸಿದ ಪೊಲೀಸರು, ಜೈಲಿಗಟ್ಟಿದ್ದಾರೆ.

ಭಜರಂಗ್ ಬಾಲಿ ಹೋಟೆಲ್‌ಗೆ ಹೋದಾಗ ಮತ್ತು ಅವನ ತಾಯಿ ಮನೆಯಲ್ಲಿ ಇಲ್ಲದಿದ್ದಾಗ, ಮುನ್ನಾ ಕುಮಾರ್ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದನು ಎಂದು ಸಂತ್ರಸ್ತೆ ಬಾಲಕಿ ತಿಳಿಸಿದ್ದಾಳೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button