Kannada NewsKarnataka NewsLatest
ಗ್ರಾಮೀಣ ಮಕ್ಕಳಿಗೂ ಬಂತು ಡಿಜಿಟಲ್ ಲೈಬ್ರರಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿಯಲ್ಲಿ ಮಕ್ಕಳಿಗಾಗಿ ನಿರ್ಮಾಣಗೊಂಡಿರುವ ಡಿಜಿಟಲ್ ಲೈಬ್ರರಿಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಉದ್ಘಾಟಿಸಿದರು.
ಭಾರತದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದ ಕ್ರಾಂತಿ ಎಬ್ಬಿಸಿದ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಸಾವಿತ್ರಿಬಾಯಿ ಫುಲೆ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿದ ಲಕ್ಷ್ಮೀ ಹೆಬ್ಬಾಳಕರ್, ಸಮಾಜದ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ, ಮಹಿಳೆಯರನ್ನು ಜಾಗೃತರನ್ನಾಗಿ ಮಾಡಿ ಶಿಕ್ಷಣದ ಕಿಡಿ ಹೊತ್ತಿಸಿದ ವೀರ ನಾರಿ ಸಾವಿತ್ರಿಬಾಯಿ ಫುಲೆ ನಮಗೆಲ್ಲ ಆದರ್ಶ. ಅವರ ಹೆಸರಿನಲ್ಲಿ ಇಲ್ಲಿ ಗ್ರಂಥಾಲಯ ಆರಂಭಿಸಲಾಗುತ್ತಿದೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೆಬ್ಬಾಳಕರ್ ಕರೆ ನೀಡಿದರು.
ಇದೇ ಸಮಯದಲ್ಲಿ ಗ್ರಾಮದ ಗರ್ಭಿಣಿಯರಿಗೆ ಪೌಷ್ಠಿಕ ಆಹಾರವನ್ನು ವಿತರಿಸಿ, ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ ಧಾನವಾಡ್ಕರ್, ಮೋಹನ ಸಾಂಬ್ರೇಕರ್, ಬಾಳು ದೇಸೂರಕರ್, ಮಹೇಶ ಕೋಲಕಾರ, ಸಿಡಿಪಿಓ ಚಂದ್ರಶೇಖರ ಸುಖಸಾರೆ, ಪಿಡಿಓ ಸುಜಾತಾ ಬಟಕುರ್ಕಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಹಿರೋಜಿ, ಉಪಾದಕ್ಷೆ ಅಂಜನಾ ನಾಯಕ, ಬಿ ಇ ಓ ದಾಸಪ್ಪಗೌಡರ, ಸಿ ಆರ್ ಪಿ ತಾವರೆ, ರಮೇಶ ಹಿರೋಜಿ, ಉಮೇಶ ಚೊಪಡೆ, ಮೋಹನ ಗರಗ, ಸಚಿನ ಜಾಧವ್, ಗಣೇಶ ಸುತಾರ, ದಿನೇಶ್ ಲೋಹಾರ, ಮೀನಾಕ್ಷಿ ಪಾಟೀಲ, ಮಂಜುಳಾ ನಾಯಕ, ಲಕ್ಷ್ಮೀ ಶಿಂದೆ, ಲಕ್ಷ್ಮೀ ಸುತಾರ, ಕಲಾವತಿ ದೇಸೂತಕರ್, ಅನುರಾಧಾ ವಾಘ್ಮೊರೆ, ಶೀಲಾ ಸಾಂಬ್ರೇಕರ್, ಅಶ್ವಿನಿ ಲೋಹಾರ ಮುಂತಾದವರು ಉಪಸ್ಥಿತರಿದ್ದರು.
https://pragati.taskdun.com/where-have-gone-those-days-when-the-house-was-full-of-values-a-special-article/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ