ಪ್ರಗತಿವಾಹಿನಿ ಸುದ್ದಿ, ಸವದತ್ತಿ – ಗ್ರಾಮೀಣ ಕ್ರೀಡೆಗಳು ಇಂದು ನಶಿಸಿ ಹೋಗುತ್ತಿದ್ದು, ಕೇವಲ ಕ್ರಿಕೆಟ್, ಕಬಡ್ಡಿ, ವಾಲಿಬಾಲ್ ನಂತಹ ಕ್ರೀಡೆಗಳಿಗೆ ಮಾತ್ರ ಪ್ರಾಶಸ್ತ್ಯ ಸಿಗುತ್ತಿದೆ ಎಂದು ಉದ್ಯಮಿ ಸೌರವ್ ಆನಂದ ಚೋಪ್ರಾ ವಿಷಾದ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಜಕಬಾಳದಲ್ಲಿ 115 ಕಿಲೋ ಉಸುಕಿನ ಚೀಲ ಎತ್ತುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ನನ್ನ ತಂದೆ ಆನಂದ ಚೋಪ್ರಾ ಗ್ರಾಮೀಣ ಕ್ರೀಡೆಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಯುವಕರನ್ನು ಪ್ರೋತ್ಸಾಹಿಸುತ್ತಿದ್ದರು. ತಾಲೂಕಿನ ಜನರು ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅದೇ ಪ್ರೀತಿ, ವಿಶ್ವಾಸ, ಪ್ರೋತ್ಸಾಹ ನನಗೂ ಇರಲಿ ಎಂದು ವಿನಂತಿಸಿದರು.
ಉಸುಕಿನ ಚೀಲ ಎತ್ತುವ ಸ್ಪರ್ಧೆಯ ಬಹುಮಾನಗಳನ್ನು ಸೌರವ್ ಚೋಪ್ರಾ ಪ್ರಾಯೋಜಿಸಿದ್ದರು.
ಬೆಳಗಾವಿಯಲ್ಲಿ ಕನಿಷ್ಠ 30 ದಿನದ ಅಧಿವೇಶನ ನಡೆಸಿ – ಡಾ.ಪ್ರಭಾಕರ ಕೋರೆ ಆಗ್ರಹ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ