Latest

ಅಂತರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸೌರಭ್ ಚೌದರಿ

ಪ್ರಗತಿವಾಹಿನಿ ಸುದ್ದಿ; ಕೈರೊ: ಈಜಿಪ್ಟ್ ನ ಕೈರೋದಲ್ಲಿ ನಡೆದಿರುವ ಅಂತರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯ ಪುರುಷರ ವಿಭಾಗದ 10 ಮೀ. ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌದರಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಸೌರಭ್ ಸಾಧನೆಗೆ ಕ್ರೀಡಾಪ್ರಿಯರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸ್ಪರ್ಧೆಯಲ್ಲಿ ರಷ್ಯಾದ ಚರ್ನೋವಸ್ಸೋವ್ ಕಂಚು ಗೆದ್ದು ಸಾಧನೆ ಮಾಡಿದ್ದಾರೆ. ಪದಕ ಪ್ರದಾನ ಕಾರ್ಯಕ್ರಮದ ವೇಳೆ ಪದಕ ಗೆದ್ದವರ ಹೆಸರಿನ ಮುಂದೆ ಅವರ ರಾಷ್ಟ್ರದ ಹೆಸರು ಮತ್ತು ರಾಷ್ಟç ಧ್ವಜದ ಲಾಂಛನ ಹಾಕುವುದು ಸಂಪ್ರದಾಯ. ಆದರೆ ರಷ್ಯಾದ ಪದಕ ವಿಜೇತ ಸ್ಪರ್ಧಿಯ ಹೆಸರಿನ ಮುಂದೆ ರಷ್ಯಾ ರಾಷ್ಟ್ರ ಧ್ವಜ ಲಾಂಛನ ಮತ್ತು ರಷ್ಯಾ ರಾಷ್ಟ್ರದ ಹೆಸರನ್ನು ತೆಗೆಯಲಾಗಿತ್ತು. ಈ ಮೂಲಕ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿರುವುದಕ್ಕೆ ಅಂತರಾಷ್ಟ್ರೀಯ ಶೂಟಿಂಗ್ ಫೆಡರೇಶನ್ ವಿರೋಧ ವ್ಯಕ್ತಪಡಿಸಿದೆ.

Home add -Advt

ಅಲ್ಲದೇ ರಷ್ಯಾದ ಹೆಸರು ಮತ್ತು ಲಾಂಛನ ಅಳಿಸಿ ಹಾಕಿರುವ ಪದಕ ಪ್ರದಾನ ಸಮಾರಂಭದ ಫೋಟೊವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಫೆಡರೇಶನ್, ಶೂಟಿಂಗ್ ಕೇವಲ ಸ್ಪರ್ಧೆಯ ಗುರಿಗೆ ಸೀಮಿತವಾಗಿರಲಿ, ಶೂಟಿಂಗ್‌ನಿAದ ರಕ್ತ ಹರಿಸಬೇಡಿ ಎಂದು ಮೆಸೇಜ್ ಹಾಕಿದೆ.
ಬುರ್ಕಾದ ಕಸೂತಿಯಲ್ಲಿತ್ತು 18 ಲಕ್ಷದ ಚಿನ್ನ

Related Articles

Back to top button