ಕೆಜಿಎಫ್ -2 : ರವೀನಾ ಟಂಡನ್ ಆ ಆಸೆ ಈಡೇರಲೇ ಇಲ್ವಂತೆ !

ಪ್ರಗತಿವಾಹಿನಿ ಸುದ್ದಿ, ಮುಂಬೈ – ರಾಕಿಂಗ್ ಸ್ಟಾರ್ ಯಶ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಕೆಜಿಎಫ್ -೨ ಶೂಟಿಂಗ್ನಲ್ಲಿ ನಿರಾಸೆಯಾಗಿದೆ ಎಂದು ಬಾಲಿವುಡ್ ನಟಿ ರವೀನಾ ಟಂಡನ್ ಹೇಳಿಕೊಂಡಿದ್ದಾರೆ.

ಹೌದು. ಕೆಜಿಎಫ್ -೧ ಯಶಸ್ಸಿನ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ ಭಾಗ ೨ನ್ನು ನಿರ್ದೇಶನ ಮಾಡುತ್ತಿದ್ದು ಈ ಚಿತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟಿ ನಟಿ ರವೀನಾ ಟಂಡನ್ ಮತ್ತು ಸಂಜಯ್‌ದತ್ ಕೂಡ ನಟಿಸುತ್ತಿದ್ದಾರೆ.

Home add -Advt

ರವೀನಾ ಟಂಡನ್ ಅವರಿಗೆ ಸಂಜಯ್ ದತ್ ಜೊತೆ ನಟಿಸುವ ಆಸೆಯಿತ್ತಂತೆ. ಆದರೆ ಸಂಜಯ್ ದತ್, ರವೀನಾ ಜೊತೆಯಾಗಿ ನಟಿಸುವ ಒಂದು ದೃಶ್ಯವೂ ಕೆಜಿಎಫ್ ೨ ಚಿತ್ರದಲ್ಲಿ ಇಲ್ಲದ ಕಾರಣ ತಮಗೆ ನಿರಾಸೆಯಾಗಿದೆ ಎಂದು ರವೀನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತಾನು ಮತ್ತು ಸಂಜಯ್ ದತ್ ಒಟ್ಟಾಗಿ ಇರುವ ದೃಶ್ಯವನ್ನು ಮಾಡಿ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಹೇಳಿದರೂ ಏನೂ ಲಾಭವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಜಿಎಫ್ -೨ನಲ್ಲಿ ಮಹಿಳಾ ರಾಜಕಾರಣಿಯ ಪಾತ್ರದಲ್ಲಿ ರವೀನಾ ಕಾಣಿಸಿಕೊಳ್ಳಲಿದ್ದಾರೆ. ದಿವಂಗತ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಪಾತ್ರದಿಂದ ಪ್ರೇರಣೆ ಪಡೆದ ರಮೀಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದರೂ ರವೀನಾ ಅದನ್ನು ಅಲ್ಲಗಳೆದಿದ್ದು ಇಂದಿರಾಗಾಂಧಿ ಅವರ ಬದುಕಿಗೂ ನನ್ನ ಪಾತ್ರಕ್ಕೂ ಹೋಲಿಕೆಯಿಲ್ಲ ಎಂದಿದ್ದಾರೆ.

ಕೆಜಿಎಫ್ ಭಾಗ ೧ರಲ್ಲಿ ರಮೀಕಾ ಸೇನ್ ಪಾತ್ರವು ರಾಕಿ ಭಾಯ್‌ಗೆ ಡೆತ್ ವಾರಂಟ್ ಅನ್ನು ಜಾರಿ ಮಾಡುವ ಪಾತ್ರವಾಗಿದೆ. ಪ್ರಸ್ತುತ ಭಾಗ ೨ರಲ್ಲೂ ರಮಿಕಾ ಸೇನ್ ಪಾತ್ರವು ಮಹತ್ವದ್ದಾಗಿದೆ. ಕೆಜಿಎಫ್?೨ನಲ್ಲಿ ಸಂಜಯ್‌ದತ್ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆಪ್ರಧಾನ ಮಂತ್ರಿ ರಮಿಕಾ ಸೇನ್?ಆಗಿ ರವೀನಾ ಟಂಡನ್?ಕಾಣಿಸಿಕೊಳ್ಳುತ್ತಿದ್ದಾರೆ.

ಭೀಕರ ಬಾಂಬ್ ಸ್ಫೋಟ; ಮೂವರು ಬಲಿ

Related Articles

Back to top button