
ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಗಾನ ಗಂಧರ್ವ, ಸ್ವರ ಸಾಮ್ರಾಣ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ್ದ ನಿರ್ದೇಶಕ ಭಾರತಿ ರಾಜ್, ಆಘಾತಕಾರಿ ಮಾಹಿತಿ ನೀಡಿದ್ದು, ಪ್ರಕೃತಿ ಮುಂದೆ ನಮ್ಮದೇನೂ ಇಲ್ಲ ಎಂದು ಭಾವುಕರಾಗಿದ್ದಾರೆ.
ಆಸ್ಪತ್ರೆ ಭೇಟಿ ಬಳಿಕ ಮಾತನಾಡಿರುವ ಭಾರತಿ ರಾಜ್, ದು:ಖದಿಂದಾಗಿ ನನಗೆ ಮಾತು ಹೊರಡುತ್ತಿಲ್ಲ. ನನ್ನ ಆತ್ಮೀಯ ಗೆಳೆಯ ಎಸ್ ಪಿಬಿ ಅವರನ್ನು ಈ ಸ್ಥಿತಿಯಲ್ಲಿ ನೋಡಲಾಗದು. ಪ್ರಕೃತಿ ಮುಂದೆ ನಾವೆಷ್ಟೇ ದೊಡ್ಡವರಾದರೂ ಏನೂ ನಡೆಯುವುದಿಲ್ಲ. ಆದರೂ ಅವರು ಎದ್ದು ಬರುತ್ತಾರೆ ಎಂಬ ನಂಬಿಕೆಯಿದೆ. ಎಲ್ಲವೂ ಈಗ ದೇವರ ಕೈಯಲ್ಲಿದೆ ಎಂದು ಹೇಳಿದ್ದಾರೆ.
ಕಳೆದ 50 ವರ್ಷಗಳಿಂದ ನನಗೆ ಎಸ್ ಪಿಬಿ ಆಪ್ತ ಸ್ನೇಹಿತನನಾಗಿದ್ದ. ತುಂಬಾ ದು:ಖದಲ್ಲಿದ್ದೇನೆ. ನನಗೆ ಏನೂ ಮಾತನಾಡಲು ಆಗುತ್ತಿಲ್ಲ ಎಂದಿದ್ದಾರೆ.