ಪ್ರಗತಿ ವಾಹಿನಿ ಸುದ್ದಿ ಚೆನ್ನೈ: ಖ್ಯಾತ ಗಾಯಕ ದಿ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಕೋವಿಡ್‌ನಿಂದಾಗಿ 2020 ರ ಸೆಪ್ಟೆಂಬರ್‌ನಲ್ಲಿ ವಿಧಿವಶರಾಗಿದ್ದರು. ನಿಧನಕ್ಕೂ ಕೆಲವೇ ದಿನಗಳ ಮೊದಲು ಅವರು ಹಾಡಿದ ಕಟ್ಟ ಕಡೆಯ ಆಲ್ಬಂ ಸಾಂಗ್ ಏ.9ರಂದು ಎನ್‌ಎಫ್‌ಟಿ ಫ್ಲಾಟ್‌ಫಾರ್ಮ್ ಮೂಲಕ ಹರಾಜು ಕರೆಯಲಾಗುತ್ತಿದೆ.
ಸಿಂಫೋನಿ ರೆಕಾರ್ಡ್ಸ್ ಸಂಸ್ಥೆ ಮೂಲಕ ತಮಿಳಿನಲ್ಲಿ ಭಕ್ತಿ ಗೀತೆಗಳ ವಿಶ್ವ ರೂಪ ದರ್ಶನಂ ಹೆಸರಿನ 30 ನಿಮಿಷಗಳ ಆಲ್ಬಂಗೆ ಅವರು ಧ್ವನಿ ನೀಡಿದ್ದರು. ಡಿಜಿನೂರ್ ಹೆಸರಿನ ಸಂಸ್ಥೆ ಏ.9ರಂದು ಈ ಆಲ್ಬಂ ಅನ್ನು ಎನ್‌ಎಫ್‌ಟಿ ಮೂಲಕ ಹರಾಜು ಕರೆಯಲಿದ್ದು ಮೂಲ ಬೆಲೆಯನ್ನು 1.14ಕೋಟಿಗೆ ನಿಗದಿಪಡಿಸಲಾಗಿದೆ.
ಎಸ್‌ಪಿಬಿ ಅಭಿಮಾನಿಗಳು ಮತ್ತು ಸಂಗೀತಪ್ರಿಯರಿಗಾಗಿ ಏ. 2ರಂದು ಈ ಆಲ್ಬಂನ 2 ನಿಮಿಷಗಳ ಟ್ರಾö್ಯಕ್‌ಅನ್ನು ಬಿಡುಗಡೆ ಮಾಡಲಾಗುತ್ತಿದೆ.
ನಲಪಾಡ್ ರೆಸ್ಟೋರೆಂಟ್ ನಲ್ಲಿ ಮಹಿಳೆ ಮೇಲೆ ಹಲ್ಲೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ