ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ಸೋಮಶೇಖರ್ ಗೆ ಬ್ಲ್ಯಾಕ್ ಮೇಲ್ ಕೇಸ್ ಗೆ ಸಂಬಂಧಿಸಿದಂತೆ ನನ್ನ ಪುತ್ರಿಯ ಪಾತ್ರವಿಲ್ಲ. ಪ್ರಕರಣ ಹಿಂದಿನ ಷಡ್ಯಂತದ ಬಗ್ಗೆ ತನಿಖೆಯಾಗಲಿ ಎಂದು ಇಂದಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ್, ಬ್ಲ್ಯಾಕ್ ಮೇಲ್ ಪ್ರಕರಣಕ್ಕೂ ನನ್ನ ಮಗಳಿಗೂ ಯಾವುದೇ ಸಂಬಂಧವಿಲ್ಲ, ಇದರಲ್ಲಿ ಆಕೆಯ ಪಾತ್ರವೂ ಇಲ್ಲ. ಆಕೆಗೆ ನಿಶಾಂತ್ ಸೋಮಶೇಖರ್ ಪರಿಚಯವೂ ಇಲ್ಲ. ಪ್ರಕರಣದ ನನ್ನ ಮಗಳನ್ನು ಹಾಗೂ ನನ್ನ ಕುಟುಂಬವನ್ನು ಯಾಕೆ ಎಳೆದು ತರಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಪೊಲೀಸರು ಸಂಪೂರ್ಣ ತನಿಖೆ ನಡೆಸಲಿ ಸತ್ಯಾಸತ್ಯತೆ ಏಎಂಬುದನ್ನು ಬಹಿರಂಗಪಡಿಸಲಿ ಎಂದರು.
ನನ್ನ ಮಗಳು ಎಂಎಸ್ ವಿದ್ಯಾಭ್ಯಾಸಕ್ಕಾಗಿ ಕಳೆದ ಮಾರ್ಚ್ ನಲ್ಲಿ ಯುಕೆಗೆ ಹೋಗಿದ್ದಾಳೆ. ರಾಕೇಶ್ ಅಪ್ಪಣ್ಣ ಹಿಂದೆ ನನ್ನ ಮಗಳ ಕ್ಲಾಸ್ ಮೇಟ್. ಯಾವುದೋ ಸಿಮ್ ಒಟಿಪಿಯನ್ನು ಆತ ಕೇಳಿದ್ದನಂತೆ ಅದಕ್ಕೆ ನನ್ನ ಮಗಳು ಒಟಿಪಿಗೆ ಸಹಾಯ ಮಾಡಿದ್ದಾಳೆ ಅಷ್ಟೇ. ಅಷ್ಟಕ್ಕೆ ಇಷ್ಟೆಲ್ಲ ಪ್ರಕರಣ ನಡೆಯುತ್ತೆ ಎಂಬುದು ಯಾರೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆತ ಏನು ಮಾಡಿದ್ದಾನೆ ಎಂಬುದು ಗೊತ್ತಿಲ್ಲ, ಈ ಪ್ರಕರಣದ ಹಿಂದಿರುವವರು ಯಾರು? ಯಾಕೆ ನನ್ನ ಮಗಳನ್ನು ಎಳೆದು ತರುತ್ತಿದ್ದಾರೆ ಎಂಬುದು ಗೊತ್ತಾಗಬೇಕು. ಎಂದು ಹೇಳಿದರು.
ಪ್ರಕರಣಕ್ಕೂ ನನ್ನ ಮಗಳಿಗೂ ಯಾವುದೇ ಸಂಬಂಧವಿಲ್ಲ. ಆಕೆಗೆ ನಿಶಾಂತ್ ಸೋಮಶೇಖರ್ ಪರಿಚಯವೂ ಇಲ್ಲ. ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ನನ್ನ ಮಗಳನ್ನು ಹಾಗೂ ನನ್ನ ಕುಟುಂಬವನ್ನು ಯಾಕೆ ಎಳೆದು ತರಲಾಗುತ್ತಿದೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ. ಇಂತಹ ಆರೋಪದಿಂದ ಬಹಳ ಬೇಸರವಾಗಿದೆ ಎಂದರು.
ಸಚಿವ ಎಸ್.ಟಿ.ಸೋಮಶೇಖರ್ ಬಳಿಯೂ ನಾನು ಮಾತನಾಡಿದ್ದೇನೆ. ಅವರೂ ಕೂಡ ಪ್ರಕರಣದ ಬಗ್ಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಅವರು ನನ್ನ ಹಳೆ ಸ್ನೇಹಿತರು. ಯಾರೇ ಆಗಲಿ ರಾಜಕಾರಣ ಮಾಡುವುದಿದ್ದರೆ ನೇರವಾಗಿ ನನ್ನ ಜತೆ ಮಾಡಲಿ. ಅದನ್ನು ಬಿಟ್ಟು ರಾಜಕಾರಣಕ್ಕೆ ಕುಟುಂಬ ಸದಸ್ಯರನ್ನು ಎಳೆದು ತರಬೇಡಿ. ನಾವು ಧಾರ್ಮಿಕ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ದೇವರ ಮೇಲೆ ನಂಬಿಕೆಯಿಟ್ಟವರು ಸತ್ಯವೇನೆಂಬುದು ಬಹಿರಂಗವಾಗುತ್ತೆ. ಇಂತ ಆರೋಪದಿಂದ ನಾನು , ನನ್ನ ಕುಟುಂಬ ಬಹಳ ನೊಂದಿದ್ದೇವೆ. ರಾಜಕಾರಣವನ್ನೇ ಬಿಟ್ಟುಬಿಡಿ ಎಂದು ಮನೆಯವರು ಹೇಳುತ್ತಿದ್ದಾರೆ. ಅದೇನೇ ಇರಲಿ ಈಗ ನಡೆದಿರುವ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಲಿ ಇದರ ಹಿಂದಿನ ಹುನ್ನಾರವೇನೆಂಬುದು ಬಹಿರಂಗವಾಗಲಿ ಎಂದು ತಿಳಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ 30 ‘ಕೈ’ ನಾಯಕರ ವಿರುದ್ಧ FIR ದಾಖಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ