ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸ್ಫೋಟದ ಬೆನ್ನಲ್ಲೇ 6 ಸಚಿವರು ಕೋರ್ಟ್ ಮೊರೆ ಹೋಗಿದ್ದು, ಇಂದು ಮತ್ತೆ 6 ಸಚಿವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಎಸ್.ಟಿ.ಸೋಮಶೇಖರ್, ಅವಮಾನಕ್ಕೆ, ತೇಜೋವಧೆ ಮಾಡಲು ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೋರ್ಟ್ ಮೊರೆ ಹೋಗಿದ್ದೇವೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಭಯದಿಂದ ಕೋರ್ಟ್ ಮೊರೆ ಹೋಗಿಲ್ಲ. ರಾಜಕೀಯ ಷಡ್ಯಂತ್ರದಿಂದ 2-3 ನಿಮಿಷಗಳಲ್ಲಿ ನಮ್ಮ ತೇಜೋವಧೆ ಮಾಡಿದರೆ ಹೇಗೆ? ಇಂತ ಸುದ್ದಿ ಪ್ರಸಾರಕ್ಕೆ ತಡೆ ನೀಡಬೇಕು. ನಾವೆಲ್ಲ ಒಟ್ಟು 16 ಶಾಸಕರು, ಸಚಿವರು ಕೋರ್ಟ್ ಮೊರೆ ಹೋಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ಎಲ್ಲರೂ ಸೇರಿ ಜಂಟಿ ಸುದ್ದಿಗೋಷ್ಠಿ ನಡೆಸಿ ಬಾಂಬೆಯಲ್ಲಿ ನಡೆದ ವಿಚಾರಗಳನ್ನು ರಾಜ್ಯದ ಜನತೆಗೆ ತಿಳಿಸುತ್ತೇವೆ ಎಂದರು.
ಹಳೆಯ ಸ್ನೇಹಿತರು ನನಗೆ ಹೆಳಿದ ಪ್ರಕಾರ ಅಧಿವೇಶನದ ಸಂದರ್ಭದಲ್ಲಿ ಬಾಂಬೆ ಸ್ನೇಹಿತರ ತೇಜೋವಧೆ ಮಾಡಲು ಟಾರ್ಗೆಟ್ ಮಾಡಲಾಗಿದೆ. ಈ ಮೂಲಕ ಅವರ ರಾಜೀನಾಮೆ ಕೊಡಿಸಲು ಷಡ್ಯಂತ್ರ ನಡೆದಿದೆ ಎಂದು. ಹೀಗಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ತಿಳಿಸಿದರು.
ಇನ್ನೂ 6 ಸಚಿವರು ಇಂದು ನ್ಯಾಯಾಲಯಕ್ಕೆ : ಮುಂಬೈಗೆ ಹೋದವರೆಲ್ಲ ಕೋರ್ಟ್ ಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ