Latest

ಕೊರೊನಾತಂಕ; ಮಾಜಿ ಸಚಿವ ಕೈರಂಟೈನ್

ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜ್ಯಾಧ್ಯಂತ ಕೊರೊನಾ ಅಟ್ಟಹಾಸಕ್ಕೆ ಜನರು ನಲುಗುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಮಾಜಿ ಸಚಿವ ಸಾ.ರಾ ಮಹೇಶ್ ಅವರನ್ನು ಕ್ವಾರಂಟೈನ್ ಮಾಡಲಾಗಿದೆ.

ಮೈಸೂರಿನ ಕೆ.ಆರ್ ನಗರ ತಾಲೂಕಿನ ಮಹಿಳಾ ತಹಶೀಲ್ದಾರ್‍ಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಸಾ.ರಾ ಮಹೇಶ್‍ ಕೂಡ ಕ್ವಾರಂಟೈನ್ ಆಗಿದ್ದಾರೆ.

Related Articles

ಸಾ.ರಾ ಮಹೇಶ್ ಅವರು ಎರಡು ದಿನಗಳ ಹಿಂದೆ ತಹಶೀಲ್ದಾರ್ ಜೊತೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಸೀಲ್‍ಡೌನ್ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಬ್ರಾಹ್ಮಣರ ಬೀದಿ ಮತ್ತು ಕೋಟೆ ಬೀದಿಗಳಲ್ಲಿನ 150ಕ್ಕೂ ಹೆಚ್ಚು ಕುಟುಂಬದವರಿಗೆ ಅಗತ್ಯ ವಸ್ತುಗಳು ಹಾಗೂ ಪಡಿತರ ದಿನಸಿ ಪದಾರ್ಥ ಔಷಧಿಗಳನ್ನು ವಿತರಿಸಿದ್ದರು. ಇದೀಗ ತಹಶೀಲ್ದಾರ್‍ಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮಾಜಿ ಸಚಿವರನ್ನು ಕ್ವಾರಂಟೈನ್ ಮಾಡಲಾಗಿದೆ.

Home add -Advt

Related Articles

Back to top button