ಪ್ರಗತಿವಾಹಿನಿ ಸುದ್ದಿ, ಮುಂಬೈ: ಕ್ರಿಕೆಟಿಗ ಸಚನ್ ತೆಂಡೂಲ್ಕರ್ ಅವರು ಬ್ಯಾಟ್ ನ ಹಿಡಿತ ಹೆಚ್ಚಿಸಲು ಕೈಗೊಂಡ ಕ್ಲೀನಿಂಗ್ ತಂತ್ರದ ವಿಡಿಯೊ ಜಾಲತಾಣಗಳಲ್ಲಿ ನೆಟ್ಟಿಗರ ಟ್ರೋಲ್ ಗೆ ಒಳಗಾಗಿದೆ.
ಸಚಿನ್ ತೆಂಡೂಲ್ಕರ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸೋಪ್ ಮತ್ತು ಟ್ಯಾಪ್ ನೀರನ್ನು ಬಳಸಿ ಬ್ಯಾಟ್ ಹಿಡಿತ ಹೆಚ್ಚಿಸಲು ಸ್ವಚ್ಛಗೊಳಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದನ್ನು ತನ್ನ ‘ವಿಶೇಷ ವಿಧಾನ’ ಎಂದು ಹೇಳಿಕೊಂಡಿರುವ ಸಚಿನ್, ಯಾರೂ ತಮಗೆ ಈ ಶೈಲಿಯನ್ನು ಕಲಿಸಿಲ್ಲ. ಅದು ತಮ್ಮ ‘ಕರುಳಿನ ಭಾವನೆ’ ಎಂದು ಹೇಳಿಕೊಂಡಿದ್ದಾರೆ.
ಆದರೆ ಅನೇಕ ನೆಟ್ಟಿಗರು ಇದು ನೀರಿನ ಅಪವ್ಯಯ ಎಂದು ಅಪಸ್ವರ ಎತ್ತಿದ್ದಾರೆ. “ಸರ್…ನೀರು ಉಳಿಸುವ ವಿಷಯ ಏನಾಯಿತು?” ಎಂದು ಪ್ರಶ್ನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ