*ಮನಮೋಹನ ಸಿಂಗ್ ಅವರು ನಿಧನ ಹೊಂದಿದ್ದು ದುಖಃದ ವಿಚಾರ: ಶಶಿ ತರೂರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನಮೋಹನ ಸಿಂಗ್ ಅವರು ನಿಧನ ಹೊಂದಿದ್ದು ದುಖಃದ ವಿಚಾರ. ಅವರು ಹಲವು ವರ್ಷಗಳಿಂದ ನನಗೆ ಗೊತ್ತು. ದೊಡ್ಡ ಮನ್ಸಿನಿಂದ ಕೆಲಸ ಮಾಡಿದ್ರು. ದೊಡ್ಡ ವ್ಯಕ್ತಿ ನಮ್ಮ ಬಿಟ್ಟು ಹೋಗಿದ್ದಾರೆ ಎಂದು ಕಾಂಗ್ರೆಸ್ ನ ಕೇಂದ್ರ ನಾಯಕ ಡಾ. ಶಶಿ ತರೂರ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೆಹಲಿಯಲ್ಲಿ ಕೆಲಸ ಮಾಡುವಾಗ ಅವರು ಸೌಥ್ ಕಮಿಷನ್ ಅಧ್ಯಕ್ಷರಿದ್ದರು, ದೊಡ್ಡ ವ್ಯಕ್ತಿ. ಅವರು ಪ್ರಧಾನಿಯಾದ ಬಳಿಕ ನಮ್ಮ ಸಂಪರ್ಕ ಬಹಳ ಹತ್ತಿರ ಆಯಿತು. ಸೋನಿಯಾ ಸಮ್ಮುಖದಲ್ಲಿ ರಾಜಕೀಯಕ್ಕೆ ಅವರೆ ಕರೆದುಕೊಂಡರು. ನಮ್ಮ ಬಿಟ್ಟು ಹೋಗಿದ್ದರಿಂದ ಬಹಳ ದುಃಖ ಇದೆ.
ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸಿದ್ರು, ದೇಶದಲ್ಲಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಅನೇಕ ಅಭಿವೃದ್ಧಿ ಹಾಗೂ ಬದಲಾವಣೆ ಆಯಿತು. ಮನಹೋಹನ್ ಸಿಂಗ್ ಅವರ ಹೃದಯ ಮನಸ್ಸು ದೊಡ್ಡ ಇತ್ತು. ದೊಡ್ಡ ಮನಸಿನಿಂದ ಕೆಲಸ ಮಾಡಿದ್ರು. ದೊಡ್ಡ ವ್ಯಕ್ತಿ ನಮ್ಮ ಬಿಟ್ಟು ಹೋಗಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ