ಪ್ರಗತಿವಾಹಿನಿ ಸುದ್ದಿ; ಶಿರಸಿ: ಇಬ್ಬರು ಸಾಗವಾನಿ ಮರಗಳ್ಳರನ್ನು ಬನವಾಸಿ ಪೊಲೀಸರು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಸೋಮಶೇಖರ್ ಆನಂದ ಗೌಡ ಅವರ ಜಮೀನಿನಲ್ಲಿದ್ದ ಸುಮರು 30 ವರ್ಷದ ಹಳೆಯ ಸಾಗವಾನಿ ಮರವನ್ನು ಕತ್ತರಿಸಿ ಕಳುವು ಮಾಡಿದ್ದರು. ಕಟ್ಟಿಗೆ ಕತ್ತರಿಸುವ ಉಪಕರಣ ಬಳಸಿ 8 ರಿಂದ 10 ಅಡಿ ಉದ್ದದ ತುಂಡನ್ನು ಕತ್ತರಿಸಿ ಕಳುವು ಮಾಡಿದ್ದರು. ಪ್ರಕರಣ ಸಂಬಂಧ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ.
ಬನವಾಸಿ ರಾಮಾಪುರದ ಅರ್ಜುನ ತಿಪ್ಪಣ್ಣ ಶಿರ್ಶೆಕರ (26) ಹಾಗೂ ರಾಮಾಪುರದ ಪರಶುರಾಮ ತಿಪ್ಪಣ್ಣ ಶೀರ್ಶೆಕರ (24) ಬಂಧಿತ ಆರೋಪಿಗಳು. ಬಂಧಿತರಿಂದ ಕಳ್ಳತನವಾದ ಸುಮಾರು 1,40,000 ರೂ ಮೌಲ್ಯದ ಸಾಗವಾನಿ ತುಂಡು ಮತ್ತು ಕೃತ್ಯಕ್ಕೆ ಬಳಸಿದ 5 ಲಕ್ಷ ಮೌಲ್ಯದ ಟ್ರಾಕ್ಟರ್ ವಶಕ್ಕೆ ಪಡೆಯಲಾಗಿದೆ.
ಎಸ್ಪಿ ಎನ್. ವಿಷ್ಣುವರ್ಧನ್ ನೇತ್ರತ್ವದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್, ಡಿಎಸ್ಪಿ ಕೆ.ಎಲ್ ಗಣೇಶ ,ಸಿ.ಪಿ.ಐ ರಾಮಚಂದ್ರ ನಾಯಕ, ಪಿಎಸ್‌ಐ ಚಂದ್ರಕಲಾ ಪತ್ತಾರ, ಸುನೀಲ್‌ಕುಮಾರ್ ಬಿ.ವೈ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ