ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಾಕಷ್ಟು ಸುದ್ದಿಗಳು ಬಹಿರಂಗವಾಗುತ್ತಿವೆ. ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡವೇ ಸಲ್ಮಾನ್ ಹತ್ಯೆಗೆ ಸಂಚು ರೂಪಿಸಿತ್ತು ಎಂಬ ಮಾಹಿತಿ ಬೆನ್ನಲ್ಲೇ ಇದೀಗ ಲಾರೆನ್ಸ್ ಶಾರ್ಪ್ ಶೂಟರ್ ಒಬ್ಬನನ್ನು ನೇಮಕ ಮಾಡಿದ್ದ ಎಂಬ ಸುದ್ದಿ ಹೊರಬಿದ್ದಿದೆ.
ಇನ್ನೊಂದು ಆಘಾತಕಾರಿ ವಿಷಯವೆಂದರೆ ಗ್ಯಾಂಗ್ ಸ್ಟರ್ ಲಾರೆನ್ಸ್ ನೇಮಕ ಮಾಡಿದ್ದ ಶಾರ್ಪ್ ಶೂಟರ್ ಸಲ್ಮಾನ್ ಖಾನ್ ಮನೆ ಗ್ಯಾಲಕ್ಸಿಯ ಮುಂದಿನ ಅಪಾರ್ಟ್ ಮೆಂಟ್ ನಲ್ಲೇ ವಾಸವಾಗಿದ್ದ ಎಂಬುದು.
ಅನಾಮಧೇಯ ವ್ಯಕ್ತಿಯೊಬ್ಬ ಸಲ್ಮಾನ್ ತಂದೆ ಸಲಿಂ ಖಾನ್ ಅವರಿಗೆ ಪತ್ರ ಬರೆದು ಸಲ್ಮಾನ್ ಖಾನ್ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಪತ್ರ ಬಂದ ಬೆನ್ನಲ್ಲೇ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದರು. ಜೈಲಿನಲ್ಲಿದ್ದ ಲಾರೆನ್ಸ್ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದರು. ಇದೀಗ ದಿನಕ್ಕೊಂದು ಸುದ್ದಿ ಹೊರಬರುತ್ತಿದ್ದು, ವಿಕ್ರಮ್ ಬ್ರಾರ್ ಎಂಬ ವ್ಯಕ್ತಿಯೇ ಶಾರ್ಪ್ ಶೂಟರ್ ಎಂದು ಪೊಲೀಸರು ಗುರುತಿಸಿದ್ದಾರೆ ಎಂದು ತಿಳಿದುಬಂದಿದೆ.
ಸಲ್ಮಾನ್ ಖಾನ್ ತಾವು ವಾಸವಾಗಿರುವ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನಿಂದ ಹೊರಡುತ್ತಿದ್ದಂತೆ ಅವರ ಕಾರನ್ನು ಚೇಸ್ ಮಾಡಿ ಹತ್ಯೆ ಮಾಡಲು ವಿಕ್ರಮ್ ಬ್ರಾರ್ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ಮುಖದ ಪಾರ್ಶ್ವವಾಯುಗೆ ಒಳಗಾದ ವಿಶ್ವವಿಖ್ಯಾತ ಗಾಯಕ ಜಸ್ಟಿನ್ ಬೀಬರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ