Kannada NewsLatest

ಸಮಾಜದ ಸಂಜಿವಿನಿ ಶ್ರೀ ಕಾರಂಜಿಮಠ-ಶರಣೆ ಪ್ರೇಮಾ ಅಂಗಡಿ

ಸಮಾಜದ ಸಂಜಿವಿನಿ ಶ್ರೀ ಕಾರಂಜಿಮಠ-ಶರಣೆ ಪ್ರೇಮಾ ಅಂಗಡಿ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಪ್ರತಿ ತಿಂಗಳು ಪ್ರಥಮ ಸೋಮವಾರ ಮತ್ತು ಪ್ರತಿ ವರ್ಷ ಬರುವ ಶ್ರಾವಣ ಮಾಸದ ಎಲ್ಲ ಸೋಮವಾರ, ಶ್ರೀಮಠದ ವಾರ್ಷಿಕೋತ್ಸವ ಸಂದರ್ಭದಲ್ಲಿ 5 ದಿನಗಳವರೆಗೆ ಧರ್ಮದರ್ಶನ ಪ್ರವಚನ, ಉಪನ್ಯಾಸ, ಅನುಭಾವ, ಚಿಂತನಗಳನ್ನು ಏರ್ಪಡಿಸುವದರೊಂದಿಗೆ ಸಮಾಜದ ಜನತೆಯಲ್ಲಿ ನೈತಿಕ ಮೌಲ್ಯ, ಸಮಾನತೆಯನ್ನು ಬೆಳೆಸುವ ಸಮಾಜದ ಸಂಜೀವಿನಿಯಾಗಿದೆ ಬೆಳಗಾವಿಯ ಶ್ರೀಕಾರಂಜಿಮಠ ಎಂದು ಬೈಲಹೊಂಗಲದ ಆದರ್ಶ ಗೃಹಿಣಿ ಶರಣೆ ಶ್ರೀಮತಿ ಪ್ರೇಮಾ ಅಂಗಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇವರು ಬೆಳಗಾವಿಯ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಥಮ ಸೋಮವಾರದಂದು ನಡೆದ ಸಮಾರಂಭದಲ್ಲಿ “ಜ್ಞಾನ ದಾಸೋಹಿ ಗುಡ್ಡಾಪುರ ದಾನಮ್ಮ” ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನಿಡುತ್ತಾ ದಾನಮ್ಮಳು ಸಂಸಾರದಲ್ಲಿದ್ದುಕೊಂಡೇ ಪಾರಮಾರ್ಥ ಸಾಧಿಸಿ ಬಸವಾದಿ ಶರಣರ ತತ್ವಗಳನ್ನು ಪಾಲಿಸಿ, ಪ್ರಸಾರ ಮಾಡಿ ತನ್ನ ಬದುಕನ್ನು ಸಾರ್ಥಕ ಮಾಡಿಕೊಂಡು ಲೋಕವಂದಿಥಳಾದಳು ಎಂದು ಭಕ್ತಿ-ಭಾವದ ಮಾತುಗಳನ್ನಾಡಿದರು.

ಶ್ರೀಮಠದ ಪೂಜ್ಯರಾದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಹಾಗೂ ಉತ್ತರಾಧಿಕಾರಿಗಳಾದ ಪೂಜ್ಯಶ್ರೀ ಶಿವಯೋಗಿ ದೇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಬೆಳಗಾವಿಯ ವಕೀಲರ ಸಂಗಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಅನಿಲಕುಮಾರ ಮುಳವಾಡಮಠ ಮತ್ತು ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್‍ಗೆ ಅಧ್ಯಕ್ಷರಾದ ಶ್ರೀ ರಮೇಶ ಕಳಸಣ್ಣವರನ್ನು ಶ್ರೀಗಳು ಸನ್ಮಾನಿಸಿದರು.

ಎ. ಕೆ. ಪಾಟೀಲ ಸ್ವಾಗತ ನಿರೂಪಣೆ, ಶಂಕರ ಗುಡಗನಟ್ಟಿ ಅತಿಥಿ ಪರಿಚಯ ಗ್ರಂಥ ಪುಷ್ಪಾರ್ಪಣೆ, ಮತ್ತು ವಕೀಲರಾದ ವಿ. ಕೆ. ಪಾಟೀಲ ವಂದನಾರ್ಪಣೆ ಮಾಡಿದರು. ಎಸ್. ಎಮ್. ಮುತಾಲಿಕ ದೇಸಾಯಿಯವರ ಮಾರ್ಗದರ್ಶನದಲ್ಲಿ ಶ್ರೀಮಠದ ಮಾತೃಮಂಡಳಿ ತಾಯಂದಿರಿಂದ ವಚನ ಪ್ರಾರ್ಥನೆಯಾಯಿತು.

2ನೇ ಶ್ರಾವಣ ಸೋಮವಾರ 12/8/2019ರಂದು ಸಂಜೆ 6ಗಂಟೆಗೆ “ ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳ ಬದುಕು-ಬೆಳಕು” ಕುರಿತು ಅಪೂರ್ವ ವಾಗ್ಮಿಗಳಾದ ಪೂಜ್ಯಶ್ರೀ ಮಹಾಂತ ದೇವರು ವಿರಕ್ತಮಠ, ಶೇಗುಣಸಿ ಅವರು ಅನುಭಾವ ಪೂರ್ಣ ಉಪನ್ಯಾಸ ನೀಡಲಿದ್ದಾರೆ. ////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button