Kannada NewsLatestTech

*ಸ್ಯಾಮ್‌ಸಂಗ್ ನಿಂದ 3 ಹೊಸ ಗ್ಯಾಲಕ್ಸಿ ಸ್ಮಾರ್ಟ್‌ ಫೋನ್‌*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಸ್ಯಾಮ್ ಸಂಗ್ ಮುಂದಿನ ವಾರ ಭಾರತದಲ್ಲಿ  ಮೂರು ಹೊಸ ಗ್ಯಾಲಕ್ಸಿ ಎ ಸೀರೀಸ್  ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಗ್ಯಾಲಕ್ಸಿ ಎ ಸೀರೀಸ್ ಭಾರತದಲ್ಲಿ ಸ್ಯಾಮ್‌ಸಂಗ್‌ನ ಬಹಳ ಯಶಸ್ವೀ ಫೋನ್‌ ಸೀರೀಸ್ ಆಗಿದ್ದು, ಭಾರತದಲ್ಲಿ ಪ್ರತೀ ವರ್ಷ ಈ ಸರಣಿಯ ಲಕ್ಷಾಂತರ ಫೋನ್‌ಗಳು  ಮಾರಾಟವಾಗುತ್ತವೆ.

ಈ ಹೊಸ ಗ್ಯಾಲಕ್ಸಿ ಎ ಸೀರೀಸ್ ಫೋನ್‌ಗಳು ಕಳೆದ ವರ್ಷ ಬಿಡುಗಡೆ ಆದ ಗ್ಯಾಲಕ್ಸಿ ಎ35 ಮತ್ತು ಗ್ಯಾಲಕ್ಸಿ ಎ55 ಫೋನ್‌ಗಳ ನಂತರದ ವರ್ಷನ್  ಗಳಾಗಿರಲಿವೆ.

ಯುವ ಜನರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸ ಮಾಡಲಾಗಿರುವ ಈ ಗ್ಯಾಲಕ್ಸಿ ಎ ಸೀರೀಸ್ ಫೋನ್‌ಗಳು ಆಕರ್ಷಕ ಲುಕ್, ಜಾಸ್ತಿ ಬಾಳಿಕೆ, ಮತ್ತು ಅತ್ಯಾಧುನಿಕ ಭದ್ರತೆಯನ್ನು ಹೊಂದಿರಲಿದ್ದು, ಇದರಿಂದ ಬಳಕೆದಾರರಿಗೆ ಅತ್ಯುತ್ತಮ ಮತ್ತು ಸುರಕ್ಷಿತ ಅನುಭವ ದೊರೆಯಲಿದೆ.

ಕಳೆದ ಹಲವು ವರ್ಷಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸೀರೀಸ್‌ನಲ್ಲಿ ತನ್ನ ಹಲವಾರು ವಿಶಿಷ್ಟ ಫೀಚರ್‌ಗಳನ್ನು ಪರಿಚಯಿಸಿದೆ. ಈ ಮೂಲಕ ದೊಡ್ಡ ಮಟ್ಟದ ಗ್ರಾಹಕ ಸಮೂಹಕ್ಕೆ ಹೊಸ ಆವಿಷ್ಕಾರಗಳು ತಲುಪುವುದು ಸಾಧ್ಯವಾಗಿದೆ. ಈ ಮೂರು ಹೊಸ ಗ್ಯಾಲಕ್ಸಿ ಎ ಸೀರೀಸ್ ಫೋನ್‌ಗಳ ಬಿಡುಗಡೆ ಈ ಟ್ರೆಂಡ್ ಅನ್ನು ಮುಂದುವರಿಸುವ ಸಾಧ್ಯತೆ ಇದೆ, ಭಾರತೀಯ ಗ್ರಾಹಕರಿಗೆ ಇನ್ನಷ್ಟು ಹೊಸ ಆಯ್ಕೆಗಳನ್ನು ನೀಡಲಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button