Film & EntertainmentKannada NewsKarnataka News

*ಮದುವೆಯಾಗದೆಯೇ ಗರ್ಭವತಿಯಾದ ಭಾವನಾ: ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ*

ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ಖ್ಯಾತ ನಟಿ ಭಾವನಾ ರಾಮಣ್ಣ ಮದುವೆಯಾಗದೇ ಗರ್ಭಿಣಿಯಾಗಿದ್ದು, ಶೀಘ್ರದಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಸ್ವತ: ಭಾವನಾ ಈ ಬಗ್ಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಇಂದಿನ ಆಧುನಿಕ ಯುಗದಲ್ಲಿ, ಮುಂದುವರೆದ ತಂತ್ರಜ್ಞಾನದ ಕಾಲದಲ್ಲಿ ಪತಿ ಅಥವಾ ಪುರುಷನ ದೈಹಿಕ ಸಂಬಂಧವೂ ಇಲ್ಲದೇ ಮಹಿಳೆ ತನ್ನದೇ ಗರ್ಭದಲ್ಲಿ ಮಕ್ಕಳನ್ನು ಪಡೆಯಬಹುದಾಗಿದೆ. ಅದೇ ರೀತಿ ತಂತ್ರಜ್ಞಾನದ ಮೊರೆ ಹೋಗಿರುವ ನಟಿ ಭಾವನಾ ಮದುವೆ ಎಂಬ ಅವರ ಕನಸು ನನಸಾಗದಿದ್ದರೂ ತಾನು ತಾಯಿಯಾಗಬೇಕು ಎಂಬ ಹಂಬಲಕ್ಕೆ ದಿಟ್ಟ ನಿರ್ಧಾರ ಮಾಡಿ, 40ರ ವಯಸ್ಸಿನಲ್ಲಿ ಗರ್ಭವತಿಯಾಗಿದ್ದಾರೆ.

ಐವಿಎಫ್ ಮೂಲಕ ಭಾವನಾ ಗರ್ಭಧರಿಸಿದ್ದು, ಇದೀಗ 6 ತಿಂಗಳ ಗರ್ಭಿಣಿ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ನಟಿ ಭಾವನಾ, ಒಂದು ಹೊಸ ಅಧ್ಯಾಯ. ಒಂದು ಹೊಸ ಲಯ. ನಾನು ಈಗ ಆರು ತಿಂಗಳ ಗರ್ಭಿಣಿ. ಶೀಘ್ರದಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದೇನೆ. ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು. ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ, ಅಪರಿಮಿತ ಪ್ರೀತಿ ತುಂಬಿದ ಮನೆಯಲ್ಲಿ ಸಂತೋಷದಿಂದ ಬೆಳೆಯುತ್ತಾರೆ. ತಮ್ಮ ಬಗ್ಗೆ ಹೆಮ್ಮೆ ಪಡುವ, ಆತ್ಮವಿಶ್ವಾಸ ರೀತಿಯಲ್ಲಿ ಅವರು ಬೆಳೆಯುತ್ತಾರೆ ಎಂಬ ವಿಶ್ವಾಸ ನೀಡುತ್ತೇನೆ ಎಂದಿದ್ದಾರೆ.

Home add -Advt

ಮದುವೆಯಾಗಿ ತಾಯಿಯಾಗಬೇಕು ಎಂಬುದು ನನ್ನ ಆಸೆಯಾಗಿತ್ತು, ಆದರೆ ಸಾಧ್ಯವಾಗದಿದ್ದಾಗ ಬೇರೆ ಯೋಚನೆ ಮಾಡಲಿಲ್ಲ. 20ರ ವಯಸ್ಸಿನಲ್ಲಿ ಹಾಗೂ 30ರ ವಯಸ್ಸಿನಲ್ಲಿ ನಾನು ತಾಯಿಯಾಗುವ ಬಗ್ಗೆ ಆಲೋಚಿಸಿರಲಿಲ್ಲ. ಆದರೆ 40ನೇ ವಯಸ್ಸಿನಲ್ಲಿ ತಾಯಿಯಾಗಬೇಕು ಎಂಬ ಬಯಕೆ ತೀವ್ರವಾಗಿತ್ತು, ಒಂಟಿ ಮಹಿಳೆಯಾಗಿ ಈ ದಾರಿ ಸುಲಭವಾಗಿರಲಿಲ್ಲ. ಮದುವೆಯಾಗದೇ ಮಗುವಿಗೆ ಜನ್ಮ ನೀಡುವ ಬಗ್ಗೆ ಹಿಂದೆ ಅವಕಾಶಗಳಿರಲಿಲ್ಲ. ಬಾದಲಾದ ಕಾಲಘಟ್ಟದಲ್ಲಿ ಕಾನೂನಿನಲ್ಲಿಯೂ ತಂತ್ರಜ್ಞಾದ ಮೂಲಕ ಮಗುವನ್ನು ಪಡೆಯಲು, ತಾಯ್ತನದ ಹಂಬಲವನ್ನು ಪೂರ್ಣಗೊಳಿಸಲು ಅವಕಾಶಗಳನ್ನು ನೀಡಲಾಯಿತು. ಇದೇ ನನಗೆ ಸಿಕ್ಕ ಉತ್ತಮ ಅವಕಾಶ ಎಂದು ನಾನು ಐವಿಎಫ್ ತಂತ್ರಜ್ಞಾದ ಮೊರೆ ಹೋಗಲು ನಿರ್ಧರಿಸಿ, ಆಸ್ಪತ್ರೆಗಳಲ್ಲಿ ವಿಚಾರಿಸಿದೆ. ಬಳಿಕ ನನ್ನ ಮನೆಯ ಬಳಿಯ ಐವಿಎಫ್ ಆಸ್ಪತ್ರೆಯಲ್ಲಿ ಈ ತಂತ್ರಜ್ಞಾನದ ಬಗ್ಗೆ ವೈದ್ಯರಿಂದ ಸಲಹೆಪಡೆದು ನಿರ್ಧಾರಕ್ಕೆ ಬಂದೆ. ಈ ನಿರ್ಧಾರ ಬಂಡಾಯದ ಕಾರಣಕ್ಕೆ ಅಲ್ಲ, ನನ್ನ ಸತ್ಯವನ್ನು ಗೌರವಿಸುವ ಸಲುವಾಗಿ ಆಯ್ಕೆ ಮಾಡಿಕೊಂಡೆ. ತಂದೆ, ಒಡಹುಟ್ಟಿದವರು, ಪ್ರೀತಿಪಾತ್ರರು ನನ್ನ ನಿರ್ಧಾರದ ಪರವಾಗಿ ಪ್ರೀತಿಯಿಂದ ನಿಂತುಕೊಂಡಿದ್ದಾರೆ. ಶೀಘ್ರದಲ್ಲಿಯೇ ಇಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡುತ್ತೇನೆ. ಧನ್ಯತಾ ಭಾವ ಆವರಿಸಿದೆ ಎಂದು ತಿಳಿಸಿದ್ದಾರೆ.

ನನ್ನ ಈ ಕಥೆ ಕೇವಲ ಓರ್ವ ಮಹಿಳೆಗೆ ಸ್ಫೂರ್ತಿ ತುಂಬುದರೂ ಸಾಕು. ಅದುವವೇ ನಿಜವಾದ ಸಂತೋಷ. ನನ್ನ ನಿರ್ಧಾರವನ್ನು ಬೆಂಬಲಿಸಿದ, ಜೊತೆ ನಿಂತ ರೇನ್ ಬೋ ಆಸ್ಪತ್ರೆಯ ವೈದ್ಯೆ ಡಾ. ಸುಷ್ಮಾ ಅವರಿಗೆ ಧನ್ಯವಾದಳು ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.


Related Articles

Back to top button