Latest

ಮತ್ತುಬರುವ ಔಷಧಿ ಕುಡಿಸಿ ಕನ್ನಡದ ನಟಿಯ ಮೇಲೆ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಚಿತ್ರರಂಗದ ನಟಿಯೊಬ್ಬರಿಗೆ ಜ್ಯೂಸಿನಲ್ಲಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿ ಕುಡಿಸಿ ಆಕೆ ಮೇಲೆ ಅತ್ಯಾಚಾರ ಎಸಗಿ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆರೋಪಿಯನ್ನು ಮೋಹಿತ್ ಎಂದು ಗುರುತಿಸಲಾಗಿದೆ. ಈತ ಖಾಸಗಿ ಕಂಪನಿಯಲ್ಲಿ ಸಿಇಒ ಆಗಿದ್ದು, ಅತ್ಯಾಚಾರ ಎಸಗಿ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಬೆದರಿಕೆಹಾಕುತ್ತಿದ್ದಾನೆ.

ಮೋಹಿತ್ ಮತ್ತು ನಟಿ ಕಳೆದ ವರ್ಷ ರೆಸ್ಟೋರೆಂಟ್‍ನಲ್ಲಿ ಪರಿಚಯವಾಗಿದ್ದರು. ಆರೋಪಿ ಮೋಹಿತ್ ತನ್ನ ಕಂಪನಿ ಬ್ರಾಂಡ್ ಅಂಬಾಸಿಡರ್ ಮಾಡುವುದಾಗಿ ನಟಿಯನ್ನು ಪರಿಚಯ ಮಾಡಿಕೊಂಡಿದ್ದನು. ಪರಿಚಯ ಸ್ನೇಹವಾಗಿ ಮೋಹಿತ್ ನಟಿಯ ಜೊತೆ ಸಲುಗೆ ಬೆಳಸಿದ್ದನು. ನಂತರ ಆರೋಪಿ ಮೋಹಿತ್ ನಟಿಯ ಹುಟ್ಟುಹಬ್ಬವನ್ನು ತನ್ನ ಮನೆಯಲ್ಲೇ ಆಯೋಜನೆ ಮಾಡಿದ್ದನು.

ಈ ವೇಳೆ ನಟಿಗೆ ಜ್ಯೂಸಿನಲ್ಲಿ ಮತ್ತು ಬರುವ ಮಾತ್ರೆ ಹಾಕಿ ಮಿಕ್ಸ್ ಮಾಡಿದ್ದಾನೆ. ಅದನ್ನು ಕುಡಿದ ನಟಿ ಪ್ರಜ್ಞೆ ತಪ್ಪಿದ್ದು, ಬಳಿಕ ಆಕೆಯ ಅತ್ಯಾಚಾರ ಎಸಗಿದ್ದಾನೆ. ಮರುದಿನ ಬೆಳಗ್ಗೆ ಎದ್ದಾಗ ಅತ್ಯಾಚಾರ ಮಾಡಿದ್ದಾಗಿ ಹಾಗೂ ಅದನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾಗಿ ತಿಳಿಸಿದ್ದಾನೆ.

Home add -Advt

ಅಲ್ಲದೇ ಹೇಳಿದಂತೆ ಕೇಳಬೇಕು ಇಲ್ಲವಾದಲ್ಲಿ ವಿಡಿಯೋವನ್ನು ಯೂಟ್ಯೂಬ್‍ಗೆ ಹಾಕುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾನೆ. ಇದೇ ರೀತಿ ಬೆದರಿಕೆ ಹಾಕಿ ಸುಮಾರು 20 ಲಕ್ಷ ಹಣ ವಸೂಲಿ ಹಾಗೂ ನಿರಂತರ ಅತ್ಯಾಚಾರ ನಡೆಸಿದ್ದಾಗಿ ನಟಿ ಜೆ.ಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮೋಹಿತ್ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button