Latest

ಸ್ಯಾಂಡಲ್ ವುಡ್ ನ ಇನ್ನೋರ್ವ ನಟಿಗೂ ಕೊರೊನಾ ದೃಢ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಮಹಾಮಾರಿ ಚಿತ್ರರಂಗವನ್ನೂ ಬಿಟ್ಟಿಲ್ಲ. ಈಗಾಗಲೇ ಕನ್ನಡ ಚಿತ್ರರಂಗದ ನಟ-ನಟಿಯರಿಗೂ ಸೋಂಕು ಕಾಣಿಸಿಕೊಂಡಿದ್ದು, ಇದೀಗ ಸ್ಯಾಂಡಲ್ ವುಡ್ ನ ಇನ್ನೋರ್ವ ನಟಿಗೂ ಕೊರೊನಾ ಪಾಸಿಟೀವ್ ಬಂದಿದೆ.

ಹೌದು. ಇತ್ತೀಚೆಗೆ ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಅವರಿಗೆ ಕೊರೊನಾ ಸೋಂಕು ಹರಡಿತ್ತು. ಈ ಬಗ್ಗೆ ಸ್ವತ: ಧ್ರುವ ಸರ್ಜಾ ಸಾಮಾಜಿಕ ಜಾಲತಾಣಗಲಲ್ಲಿ ಮಾಹಿತಿ ನೀಡಿದ್ದರು. ಇದೀಗ ಸರ್ಜಾ ಫ್ಯಾಮಿಲಿಯ ಮತ್ತೋರ್ವ ಸದಸ್ಯೆಗೂ ಕೊರೊನಾ ಸೋಂಕು ತಗುಲಿದೆ.

ಖ್ಯಾತ ನಟ ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಸರ್ಜಾ ಅವರಿಗೂ ಕೊರೊನಾ ಪಾಸಿಟೀವ್ ಬಂದಿದ್ದು, ಈ ಬಗ್ಗೆ ಐಶ್ವರ್ಯಾ ಟ್ವೀಟ್ ಮಾಡಿ ತಿಳಿಸಿದ್ದಾರೆ. ನನಗೆ ಇತ್ತೀಚೆಗೆ ಕೊರೋನಾ ಪಾಸಿಟಿವ್ ಬಂದಿದೆ. ನಾನು ಹೋಂ ಕ್ವಾರಂಟೈನ್​ ಆಗಿದ್ದು, ಮನೆಯಲ್ಲೇ ಅಗತ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್​​ ಮಾಡಿಸಿಕೊಳ್ಳಿ ಮತ್ತು ಮನೆಯಲ್ಲೇ ಇರಿ, ಎಂದು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button