
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿವಾದಗಳಿಗೂ ನಟ ದುನಿಯಾ ವಿಜಯ್ ಗೂ ಎಲ್ಲಿಲ್ಲದ ನಂಟು ತಮ್ಮ ಹುಟ್ಟುಹಬ್ಬದ ಸಂಭ್ರಮದ ವೇಳೆ ತಲ್ವಾರ್ ನಿಂದ ಕೇಕ್ ಕತ್ತರಿಸಿ ಹೊಸ ವಿವಾದಕ್ಕೆ ಕಾರಣರಾಗಿದ್ದ ದುನಿಯಾ ವಿಜಯ್ ಗೆ ಗಿರಿನಗರ ಪೊಲೀಸರು ನೋಟೀಸ್ ಜಾರಿಮಾಡಿದ್ದಾರೆ.
46ನೇ ಹುಟ್ಟುಹಬ್ಬದ ಸಂಭ್ರದಲ್ಲಿರುವ ನಟ ದುನಿಯಾ ವಿಜಯ್ ನಿನ್ನೆ ತಡರಾತ್ರಿ ತಮ್ಮ ನಿವಾಸದಲ್ಲಿ ಸಾವಿರಾರು ಅಭಿಮಾನಿಗಳು ಹಾಗೂ ಕುಟುಂಬದವರ ಜತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ತಲ್ವಾರ್ ನಿಂದ ಕೇಕ್ ಕತ್ತರಿಸುವ ಮೂಲಕ ಹೊಸ ವಿವಾದವನ್ನು ಎಳೆದುಕೊಂಡಿದ್ದರು. ದುನಿಯಾ ವಿಜಯ್ ತಲ್ವಾರ್ ನಿಂದ ಕೇಕ್ ಕತ್ತರಿಸುವ ವಿಡಿಯೋ ಭಾರಿ ವೈರಲ್ ಆಗಿದ್ದು, ಗಿರಿನಗರ ಪೊಲೀಸರು ವಿಜಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಅಲ್ಲದೇ ತಲ್ವಾರ್ ನಲ್ಲಿ ಜ್ಕೇಕ್ ಕತ್ತರಿಸಿದ್ದು, ಆರ್ಮ್ಸ್ ಆ್ಯಕ್ಟ್ ಅಡಿ ಪರಧಾವಾಗಿದ್ದು, ಗಿರಿನಗರ ಪೊಲೀಸರು ವಿಜಯ್ ಗೆ ನೋಟೀಸ್ ಜಾರಿ ಮಾಡಿದ್ದು, ನೋಟೀಸ್ ತಲುಪಿದ ಮೂರು ದಿನಗಳಲ್ಲಿ ಠಾಣೆಗೆ ಬಂದು ಹಜರಾಗುವಂತೆ ಸೂಚನೆ ನೀಡಿದ್ದಾರೆ.
ಈ ನಡುವೆ ಘಟನೆ ಬಗ್ಗೆ ಕ್ಷಮೆ ಕೋರಿರುವ ವಿಜಯ್, ಹುಟ್ಟುಹಬ್ಬದ ಸಂಭ್ರಮದ ವೇಳೆ ಗುಂಪಿನಲ್ಲಿ ಬಹಳಷ್ಟು ಜನರು, ಅಭಿಮಾನಿಗಳು ಇದ್ದರು. ಈ ವೇಳೆ ನನ್ನ ಕೈಗೆ ಯಾರು ತಲ್ವಾರ್ ಕೊಟ್ರೋ ಗೊತ್ತಾಗಲಿಲ್ಲ. ಅದು ತಲ್ವಾರ್ ಎಂಬುದೂ ನನ್ನ ಗಮನಕ್ಕೆ ಬರಲಿಲ್ಲ. ಕೇಕ್ ಕಟ್ ಮಾಡಿದೆ. ಗೊತ್ತಾಗದೆಯೇ ಎಡವಟ್ಟಾಗಿದೆ ಎಂದು ಕ್ಷಮೆ ಕೇಳಿದ್ದಾರೆ.
ಯಾವುದೆ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವಂತಿಲ್ಲ ಹಾಗೂ ಪ್ರದರ್ಶಿಸುವಂತಿಲ್ಲ. ಐದು ಇಂಚಿಗೂ ಉದ್ದದ ಕತ್ತಿಯನ್ನು ಇಟ್ಟುಕೊಂಡರೆ ಲೈಸೆನ್ಸ್ ಪಡೆಯಬೇಕು. ಪರವಾನಗಿ ಪಡೆಯದೇ ಆಯುಧ ಇಟ್ಟುಕೊಂಡರೆ ಅಥವಾ ಬಳಸಿದರೆ ಆರ್ಮ್ಸ್ ಆ್ಯಕ್ಟ್ ಪ್ರಕಾರ ಅಪರಾಧ. ಈ ಹಿನ್ನಲೆಯಲ್ಲಿ ನೋಟೀಸ್ ಜಾರಿಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ