*ಕನ್ನಡ ಚಿತ್ರರಂಗದಲ್ಲಿ ಮತ್ತೆ ‘ಮೀಟೂ’ ಸದ್ದು; ಕೇರಳ ಮಾದರಿ ತನಿಖೆಗೆ FIRE ಸಂಘಟನೆ ಆಗ್ರಹ; ಸಿಎಂಗೆ ಪತ್ರದ ಮೂಲಕ ಮನವಿ*
ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರರಂಗದಲ್ಲಿ ಮತ್ತೆ ‘ಮೀಟೂ’ ವಿಚಾರ ಸದ್ದು ಮಾಡುತ್ತಿದೆ. ಸ್ಯಾಂಡಲ್ ವುಡ್ ನಲ್ಲಿಯೂ ಕಾಸ್ಟಿಂಗ್ ಕೌಚ್ ಆರೋಪಗಳು ಕೇಳಿಬಂದಿದ್ದು, ಕೇರಳ ಮಾದರಿ ತನಿಖೆಗೆ ಸಮಿತಿ ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ (FIRE) ಸಂಸ್ಥೆ ಆಗ್ರಹಿಸಿದೆ.
ಕನ್ನಡ ಚಿತ್ರರಂಗದಲ್ಲಿಯೂ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಗಳು ಕೇಳಿಬಂದಿದ್ದು, ಮಹಿಳಾ ಕಲಾವಿದರು, ನಟಿಯರು, ತಂತ್ರಜ್ಞರು, ನಿರ್ದೇಶಕಿಯರ ಸುರಕ್ಷತೆ ನಿಟ್ಟಿನಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಕವಿತಾ ಲಂಕೇಶ್, ರಮ್ಯಾ, ಆಶಿಕಾ ರಂಗನಾಥ್, ಶೃತಿ ಹರಿಹರನ್, ಮಾನ್ವಿತಾ, ಪೂಜಾ ಗಾಂಧಿ, ಸುದೀಪ್, ಚೇತನ್ , ಕಿಶೋರ್, ನಿರ್ದೇಶಕ ಸುನಿ ಸೇರಿದಂತೆ 153 ಜನರ ಸಹಿಯುಳ್ಳ ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ.
ಚಿತ್ರರಂಗದಲ್ಲಿ ಮಹಿಳೆಯರು ಆರೋಗ್ಯಕರವಾಗಿ ಹಾಗೂ ಸಮಾನವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ನಿಯಮಗಳನ್ನು ತರುವಂತೆ ಫೈರ್ ಸಂಸ್ಥೆ ಒತ್ತಾಯಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ