Latest

ಮತ್ತೋರ್ವ ಹಾಸ್ಯ ಕಲಾವಿದನನ್ನು ಕಳೆದುಕೊಂಡ ಕನ್ನಡ ಚಿತ್ರರಂಗ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಭಿನ್ನ ಶೈಲಿಯ ನಟನೆಯಿಂದಲೇ ಗುರುತಿಸಿಕೊಂಡಿದ್ದ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಮೈಕಲ್ ಮಧು ವಿಧಿವಶರಾಗಿದ್ದಾರೆ.

ನಿನ್ನೆ ಸಂಜೆ 6.30ರ ಸಮಯದಲ್ಲಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಎರಡು ದಿನದ ಹಿಂದೆಯಷ್ಟೇ ಮಂಡ್ಯದಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ಮೈಕಲ್ ಅವರು ಮನೆಯಲ್ಲೇ ಕಾಲುಜಾರಿ ಬಿದ್ದಿದ್ದರು. ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೂರ್ಯವಂಶ, ಓಂ, ಶ್, ಭಜರಂಗಿ, AK 47, ವಾಲಿ ಸೇರಿದಂತೆ ಕನ್ನಡದ ಹಲವಾರು ಚಿತ್ರಗಳಲ್ಲಿ ಮೈಕಲ್ ಮನೋಜ್ನ ಅಭಿನಯದ ಮೂಲಕ ಗುರುತಿಸಿಕೊಂಡಿದ್ದರು. ಸದ್ಯ ಅವರ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಶಿವರಾಜ್​​ ಕುಮಾರ್​ ನಟನೆಯ ಓಂ ಚಿತ್ರದ ಮೂಲಕ ಮೈಕಲ್​ ಮಧು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ನಟ ಮೈಕಲ್ ಮಧು ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

Home add -Advt

Related Articles

Back to top button