Latest

ಈರುಳ್ಳಿ ವ್ಯಾಪಾರಿ ಕಿಡ್ನ್ಯಾಪ್ ಮಾಡಿ ಸಿಕ್ಕಿಬಿದ್ದ ನಿರ್ಮಾಪಕ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿನಿಮಾ ಸ್ಟೈಲ್ ನಲ್ಲೇ ಕಿಡ್ನ್ಯಾಪ್ ಮಾಡಲು ಹೋಗಿ ನಿರ್ಮಾಪಕನೊಬ್ಬ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.

ಹಾಫ್ ಮೆಂಟ್ಲು ಸಿನಿಮಾ ನಿರ್ಮಾಪಕ ಶಶಿಕುಮಾರ್ ಬಂಧಿತ ಆರೋಪಿ. ಐಟಿ ಅಧಿಕಾರಿಗಳೆಂದು ಹೇಳಿ ಈರುಳ್ಳಿ ವ್ಯಾಪಾರಿ ಶ್ರೀನಿವಾಸ್ ಎಂಬುವವರನ್ನು ಶಶಿಕುಮಾರ್ ಹಾಗೂ ಗ್ಯಾಂಗ್ ಕಿಡ್ನ್ಯಾಪ್ ಮಾಡಿತ್ತು. 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.

ಹಣ ಕೊಡದಿದ್ದಾಗ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿ ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಬಿಟ್ಟು ಹೋಗಿದ್ದರು. ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಚಿತ್ರ ನಿರ್ಮಾಪಕ ಶಶಿಕುಮಾರ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಇದೀಗ ಶಶಿಕುಮಾರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ಸಿನಿಮಾ ಮಾಡಿ ಲಾಸ್ ಆಗಿದ್ದ ನಿರ್ಮಾಪಕ ಶಶಿಕುಮಾರ್, ಕಿಡ್ನಾಪ್ ಮಾಡಲೆಂದೇ ಒಂದು ವಾರ ಕಾಲ ಈರುಳ್ಳಿ ವ್ಯಾಪಾರಿಯನ್ನು ಹಿಂಬಾಲಿಸಿ, ಪಕ್ಕಾ ಪ್ಲಾನ್ ಮಾಡಿ ಅಪಹರಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಗಾಂಜಾ ಮಾರಾಟದಲ್ಲಿ ತೊಡಗಿದ್ದ ಪೊಲೀಸರು; ಇನ್ಸ್ ಪೆಕ್ಟರ್ ಸೇರಿ 7 ಜನರು ಸಸ್ಪೆಂಡ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button