ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್‍ವುಡ್‍ನ ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ.
ರಕ್ಷಿತಾ ಮತ್ತು ಪ್ರೇಮ್ ದಂಪತಿ ಮದುವೆಯಾಗಿ ಇಂದು 13 ವರ್ಷಗಳಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಿತಾ ತಮ್ಮ ಪತಿಗೆ ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯ ತಿಳಿಸಿದ್ದಾರೆ.
ರಕ್ಷಿತಾ ಅವರು ತಮ್ಮ ಮದುವೆ ವಾರ್ಷಿಕೋತ್ಸವ ಸಂಭ್ರಮದಂದು ಸ್ನೇಹಿತರ ದಿನಾಚರಣೆಗೆ ಶುಭ ಕೂರಿದ್ದಾರೆ. ಈ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವ ಫ್ರೆಂಡ್‍ಶಿಪ್ ಡೇಗೆ ಹೋಲಿಸಿದ್ದಾರೆ. ಸ್ನೇಹಿತರ ದಿನಾಚರಣೆಗೆ ಶುಭಾಯಗಳು. ನಾವಿಬ್ಬರು ಮದುವೆಯಾಗಿ 13 ವರ್ಷಗಳಾಗಿದೆ. ನಾವಿಬ್ಬರು ಹೀಗೆ ಮುಂದಕ್ಕೂ ಇರುತ್ತೇವೆ ಎಂದು ನಾನು ಭಾವಿಸಿದ್ದೇನೆ. ಯಾವಾಗಲೂ ಸಂತೋಷವಾಗಿರಿ. ದೇವರು ನಿಮಗೆ ಆರ್ಶೀವಾದ ಮಾಡಲಿ ಎಂದು ರಕ್ಷಿತಾ ಅವರು ಇನ್ಸ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ತಮ್ಮ ಮದುವೆಯ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಮಾರ್ಚ್ 9, 2007 ರಂದು ರಕ್ಷಿತಾ ಮತ್ತು ಪ್ರೇಮ್ ಹಸೆಮಣೆ ಏರಿದ್ದರು. ರಕ್ಷಿತಾ ಮದುವೆ ನಂತರ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಅನೇಕ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ