Latest

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಶುರುವಾಗುತ್ತಾ ರಮ್ಯಾ ಮೋಡಿ? ಅವರು ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡ್ತಾರಾ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಕಳೆದ ವರ್ಷವಷ್ಟೇ ರಾಜಕೀಯ ಹಾಗೂ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದ ರಮ್ಯಾ ಬಳಿಕ ಸಾಮಾಜಿಕ ಜಾಲತಾಣಗಳಿಂದಲೂ ದೂರವಾಗಿದ್ದರು.

ನಂತರದ ದಿನಗಳಲ್ಲಿ ಆಧ್ಯಾತ್ಮಿಕ ವಿಚಾರವಾಗಿ ಕೆಲ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಮತ್ತೆ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿದ್ದರು.

Related Articles

ರಮ್ಯಾ ಚಿತ್ರರಂಗದಿಂದಲೇ ದೂರವಾಗಿದ್ದೇಕೆ? ಮತ್ತೆ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲವೇ? ಎಂಬುದು ಅಭಿಮಾನಿಗಳ ಹಲವು ದಿನಗಳ ಪ್ರಶ್ನೆಯಾಗಿತ್ತು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಸ್ವತ: ನಟಿ ರಮ್ಯಾ ಉತ್ತರ ನೀಡಿದ್ದಾರೆ.

ಮತ್ತೆ ಸಿನಿಮಾಗೆ ವಾಪಸ್ ಆಗುವ ಬಗ್ಗೆ ಪುಷ್ಠಿ ನೀಡುವಂತಹ ಪೋಸ್ಟ್ ಒಂದನ್ನು ಇನ್ ಸ್ಟಾಗ್ರಾಂ ನಲ್ಲಿ ಹಾಕಿದ್ದಾರೆ. ಚಿತ್ರರಂಗಕ್ಕೆ ನಾನು ಮರಳುವ ಬಗ್ಗೆ ಇರುವ ಕುತೂಹಲ, ನಿರೀಕ್ಷೆ ನನಗೆ ಅರ್ಥವಾಗುತ್ತೆ. ಕೆಲ ತಿಂಗಳುಗಳಿಂದ ಕುತೂಹಲಕಾರಿಯಾಗಿರುವ ಕೆಲ ಸ್ಕ್ರಿಪ್ಟ್ ಗಳನ್ನು ಕೇಳಿದ್ದೇನೆ. ಒಂದು ವೇಳೆ ಎಲ್ಲ ಸರಿಯಾದರೆ ನಾನೇ ಈ ಬಗ್ಗೆ ಘೋಷಿಸುತ್ತೇನೆ…ಅಲ್ಲಿಯವರೆಗೆ ಕುತೂಹಲ ಹಾಗೆಯೇ ಇರಲಿ ಎಂದು ಹೇಳಿದ್ದಾರೆ.

Home add -Advt

ಈ ಮೂಲಕ ರಮ್ಯಾ ಮತ್ತೆ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಬಗ್ಗೆ ಸುಳಿವು ನೀಡಿದ್ದಾರೆ.
ಮೊಹಮ್ಮದ್ ನಲಪಾಡ್ ಪೊಲೀಸರ ವಶಕ್ಕೆ

Related Articles

Back to top button