
ಪ್ರಗತಿವಾಹಿನಿ ಸುದ್ದಿ; ಕೊಡಗು: ಕೊಡಗಿನ ಬೆಡಗಿ ನಟಿ ರಾಶ್ಮಿಕಾ ಮಂದಣ್ಣವರ ನಿವಾಸದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಬಹಿರಂಗವಾಗಿವೆ. ರಶ್ಮಿಕಾ ಅವರ ಡ್ರೀಮ್ ಪ್ರಾಜೆಕ್ಟೇ ಅವರಿಗೆ ಮುಳುವಾಯ್ತಾ ಎಂಬ ಅನುಮಾನ ಕೂಡ ಆರಂಭವಾಗಿದೆ.
ಕೊಡಾಗಿನ ವಿರಾಜಪೇಟೆಯಲ್ಲಿ ಬೃಹತ್ ಮನೆ, 50 ಎಕರೆ ಕಾಫಿ ತೋಟ ಹಾಗೂ ಕಾಲ್ಯಾಣ ಮಂಟಪವನ್ನು ಹೊಂದಿರುವ ರಶ್ಮಿಕಾ ಅವರ ತಂದೆ ಎಂ ಎಂ ಮಂದಣ್ಣ, ಹಲವಾರು ಉದ್ಯಮಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಶ್ಮಿಕಾ ಕೂಡ ಉದ್ಯಮಗಳಲ್ಲಿ ತ್ಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿದ್ದು, ಹಲವಾರು ಡ್ರೀಮ್ ಪ್ರಾಜೆಕ್ಟ್ ಗಳನ್ನು ಇಟ್ಟುಕೊಂಡಿದ್ದರು ಎನ್ನಲಾಗಿದೆ.
ರಶ್ಮಿಕಾ ತಾವು ಚಿತ್ರರಂಗದಿಂದ ಸಂಪಾದಿಸಿದ ಹಣವನ್ನು ಕುಟುಂಬಸ್ಥರೊಂದಿಗೆ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ಪೆಟ್ರೋಲ್ ಬಂಕ್ ನಿರ್ಮಾಣದಲ್ಲಿ ತೊಡಗಿಸಲು ಮುಂದಾಗಿದ್ದರು. ಇದಕ್ಕಾಗಿಯೇ ವಿರಾಜಪೇಟೆ-ಮೈಸೂರು ರಸ್ತೆಯ ಬಿಟ್ಟಂಗಾಲ ಬಳಿ 5 ಎಕರೆ ಜಾಗವನ್ನು ನೋಡಿದ್ದರು. ಅಲ್ಲದೇ ಅದೇ ಮಾರ್ಗದಲ್ಲಿ ಪೆಟ್ರೋಲ್ ಬಂಕ್ ತೆರೆಯಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ. ರಶ್ಮಿಕಾ ಹಾಗೂ ಕುಟುಂಬದವರ ಈ ಉದ್ದಿಮೆಯ ಕನಸೇ ಈಗ ಐಟಿ ದಾಳಿಗೆ ಕಾರಣವಾಗಿದೆ ಎನ್ನಲಾಗಿದೆ.
ಈಗಾಗಲೇ ವಿರಾಜಪೇಟೆ ನಿವಾಸದ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳ ಒಂದು ತಂಡ ರಶ್ಮಿಕಾ ಮನೆಯಲ್ಲಿ ಪರಿಶೀಲನೆ ನಡೆಸಿದರೆ, ಇನ್ನೊಂದು ತಂಡ ವಿರಾಜಪೇಟೆಯ ಕಲ್ಯಾಣ ಮಂಟಪದಲ್ಲಿ ಪರಿಶೀಲನೆ ನಡೆಸಿದೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ರಶ್ಮಿಕಾಗೆ ಐಟಿ ಇಲಾಖೆ ಸಮನ್ಸ್ ನೀಡುವ ಸಾಧ್ಯತೆ ಇದೆ ಎನ್ನಾಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ