ಶಬರಿಮಲೆ ಯಾತ್ರೆ ರದ್ದುಗೊಳಿಸಿದ ಶಿವಣ್ಣ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರತಿವರ್ಷದಂತೆ ಈ ವರ್ಷವೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಯ್ಯಪ್ಪ ಸ್ವಾಮಿ ಮಾಲೆಧರಿಸಿದ್ದರು. ಆದರೆ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ರಘುರಾಮ್ ಮತ್ತು ತಂಡ ಶಬರಿಮಲೆ ಪ್ರವಾಸ ರದ್ದುಗೊಳಿಸಿದ್ದಾರೆ.

ಪ್ರತಿವರ್ಷ ಶಿವರಾಜ್ ಕುಮಾರ್ ಮಾಲೆ ಧರಿಸಿಕೊಂಡು ತಮ್ಮ ತಂಡದೊಂದಿಗೆ ಶಬರಿಮಲೆಯ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಹೋಗುತ್ತಿದ್ದರು. ಈ ಬಾರಿಯೂ ಅಯ್ಯಪ್ಪ ದೇವಾಲಯಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊರೊನಾ ವೈರಸ್‍ನಿಂದ ಶಿವಣ್ಣ ಮುಂಜಾಗೃತಾ ಕ್ರಮವಾಗಿ ಶಬರಿಮಲೆ ಯಾತ್ರೆಯನ್ನು ರದ್ದು ಮಾಡಿದ್ದಾರೆ.

ಇಂದು ಮನೆಯಲ್ಲಿಯೇ ಪೂಜೆ ಮಾಡಿ ಶಿವಣ್ಣ ಮಾಲೆ ತೆಗೆಯಲಿದ್ದಾರೆ. ಪೂಜೆಯನಂತರ ಜಾಲಹಳ್ಳಿಯ ಅಯ್ಯಪ್ಪ ದೇವಸ್ಥಾನಕ್ಕೆ ಶಿವರಾಜ್‍ಕುಮಾರ್ ಭೇಟಿ ಕೊಡಲಿದ್ದಾರೆ.

ಶಿವಣ್ಣ ಅವರು ನಿರ್ದೇಶಕ ರಘುರಾಮ್ ಮತ್ತು ತಂಡ ಫೆಬ್ರವರಿ 21ರಂದು ಮಾಲೆ ಧರಿಸಿತ್ತು. ಇಂದು ಸಂಜೆ ಶಬರಿಮಲೆ ಯಾತ್ರೆಗೆ ತೆರಳಲು ನಿರ್ಧರಿಸಿದ್ದರು. ಅದೇ ರೀತಿ ಯಾತ್ರೆ ಮುಗಿಸಿ ಮಾರ್ಚ್ 18ರಂದು ವಾಪಸ್ ಬರಬೇಕಿತ್ತು. ಆದರೆ ಕೇರಳದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅನೇಕ ದೇವಾಲಯಗಳು ಬಂದ್ ಆಗಿವೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button