Latest

ರಿಯಲ್ ಸ್ಟಾರ್ ಉಪೇಂದ್ರ ಅವರ ಚಿತ್ರದಲ್ಲಿ ನಟಿಸಬೇಕೇ? ಇಲ್ಲಿದೆ ಅವಕಾಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಟನೆ ಹಾಗೂ ನಿರ್ದೇಶನ ಎರಡರಲ್ಲೂ ಕನ್ನಡದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಉಪೇಂದ್ರ ಅವರ ಚಿತ್ರದಲ್ಲಿ ಅಭಿನಯಿಸಬೇಕು ಎಂಬ ಆಸೆ ಹಲವು ಅಭಿಮಾನಿಗಳಲ್ಲಿ ಇರುತ್ತದೆ. ಇದೀಗ ಅಂತಹ ಆಸಕ್ತಿಯಿರುವ ಕಲಾವಿದರಿಗೆ, ಅಭಿಮಾನಿಗಳಿಗೆ ಸುವರ್ಣಾವಕಾಶ ಇಲ್ಲಿದೆ.

ಹಲವು ವರ್ಷಗಳ ಬಳಿಕ ಉಪೇಂದ್ರ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಈಗಾಗಲೇ ಹೊಸ ಚಿತ್ರದ ತಯಾರಿ ನಡೆಸಿರುವ ಉಪ್ಪಿ, ತಮ್ಮ ಚಿತ್ರದಲ್ಲಿ ಅಭಿನಯಿಸಲು ಹೊಸಬರಿಗೆ ಅವಕಾಶ ನೀಡುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. ಈ ಮೂಲಕ ಬಂಪರ್ ಆಫರ್ ಕೊಟ್ಟಿದ್ದಾರೆ.

Home add -Advt

ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲು ನಟ-ನಟಿಯರು ಬೇಕಾಗಿದ್ದಾರೆ. 14 ರಿಂದ 60 ವರ್ಷ ವಯಸ್ಸಿನವರು ಕಲಾವಿದರು ತಾವು ನಟಿಸಿರುವ 2 ನಿಮಿಷದೊಳಗಿನ ವಿಡಿಯೋ ತುಣುಕನ್ನು [email protected]ಗೆ ಮಾರ್ಚ್ 10ರೊಳಗೆ ಕಳುಹಿಸಿಕೊಡಿ ಎಂದು ತಿಳಿಸಿದ್ದಾರೆ.


ಬಿಕಿನಿಯಾದರೂ ಧರಿಸಲಿ ಎಂದ ಪ್ರಿಯಾಂಕಾ ಗಾಂಧಿ!

Related Articles

Back to top button