Karnataka NewsLatest

ಸಂಗೊಳ್ಳಿ ರಾಯಣ್ಣ ಕೊ-ಅಪ್ ಸಂಸ್ಥೆಯ ಆಸ್ತಿ ವಿಲೇವಾರಿ ಪ್ರಕರಣ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಮೂಲದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಣಕಾಸು ಸಂಸ್ಥೆಯ ಚರ, ಸ್ಥಿರ ಆಸ್ತಿಗಳನ್ನು ವಶಕ್ಕೆ ಪಡೆದಿರುವ ಸರಕಾರ, ಶನಿವಾರದಿಂದ ಅವುಗಳನ್ನು ಸಾರ್ವಜನಿಕವಾಗಿ ಲಿಲಾವು ಮಾಡಿ, ಬಂದ ಮೌಲ್ಯದಿಂದ ಠೇವಣಿದಾರರ ಮೂಲ ಹಣ ಬಡ್ಡಿ ಸಮೇತ ಹಿಂದಿರುಗಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. 
ಬೆಳಗಾವಿ ಉಪ ವಿಭಾಗಾಧಿಕಾರಿಗಳು ಈ ಕುರಿತು ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಕೋರಿಕೆ ಸಲ್ಲಿಸಿ, ಸಂಸ್ಥೆಯ ಅಧೀನದಲ್ಲಿರುವ 110 ಆಸ್ತಿಗಳನ್ನು ಸಾರ್ವಜನಿಕವಾಗಿ ಮಾರಾಟಮಾಡಿ ಬರುವ ಹಣವನ್ನು, ಸಂಸ್ಥೆಯಲ್ಲಿ ತಮ್ಮ ಹಣವನ್ನು ಠೇವಣೆ ಇಟ್ಟ ಗ್ರಾಹಕರಿಗೆ ಹಿಂದಿರುಗಿಸಲು ಅನುಮತಿ ನೀಡಬೇಕೆಂದು ವಿನಂತಿ ಮಾಡಿಕೊಂಡ್ದಿದ್ದಾರೆ.

ಈ ಕುರಿತು ಉಪ ವಿಭಾಗಾಧಿಕಾರಿಗಳು ಸಂಸ್ಥೆಯ 16 ಪದಾಧಿಕಾರಿಗಳಿಗೆ ನೋಟೀಸ್ ನೀಡಿದ್ದಾರೆ.

ಕನ್ನಡ ಚಲನಚಿತ್ರ ನಿರ್ಮಾಪಕರಾದ ಆನಂದ್ ಅಪ್ಪುಗೋಳ್ ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದು ಸಂಸ್ಥೆಯಲ್ಲಿ ಠೇವಣಿದಾರರಿಂದ ಸಂಗ್ರಹಿಸಲಾದ ಹಣವನ್ನು ಚಲನಚಿತ್ರಗಳ ನಿರ್ಮಾಣಕ್ಕೂ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು,  ನೋಟ್ ಬ್ಯಾನ್ ನಂತರ ತೊಂದರೆಗೊಳಗಾದರೆಂದು ಹೇಳಲಾಗುತ್ತಿದೆ.

ಸಂಸ್ಥೆ ಠೇವಣಿದಾರರಿಗೆ 324 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಹಿಂದಿರುಗಿಸಬೇಕಿದ್ದು, ನೂರಕ್ಕೂ ಹೆಚ್ಚು ಗ್ರಾಹಕರು, ಗ್ರಾಹಕರ ವ್ಯವಹಾರಗಳ ಪರಿಹಾರ ಕೇಂದ್ರಕ್ಕೂ, ವಿವಿಧ ನ್ಯಾಯಾಲಯಗಳ್ಳಲ್ಲೂ ದೂರು ದಾಖಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button