Latest

ನಟಿ ಸಂಜನಾ ಬಲವಂತದ ಮತಾಂತರ; ಧರ್ಮ ಗುರು ವಿರುದ್ಧ ದೂರು ದಾಖಲು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾಣಿ ಅವರನ್ನು ಬಲವಂತವಾಗಿ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮ ಗುರುವಿನ ವಿರುದ್ಧ ಬೆಂಗಳೂರಿನ ಕಾಟನ್ ಪೇಟೆಯಲ್ಲಿ ದೂರು ದಾಖಲಾಗಿದೆ.

ಸಂಜನಾ ಪರ ಹಿರಿಯ ವಕೀಲ ಅಮೃತೇಶ್ ಅವರು ಈ ಸಂಬಂಧ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

2018ರ ಅಕ್ಟೋಬರ್ ನಲ್ಲಿ ಸಂಜನಾ ಹಿಂದೂ ಧರ್ಮ ತ್ಯಜಿಸಿ ಮುಸ್ಲೀಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎನ್ನಲಾಗಿತ್ತು. ಡ್ರಗ್ಸ್ ಜಾಲದ ಜೊತೆ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿದ್ದ ಸಂಜಾ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

 

Home add -Advt

Related Articles

Back to top button