Latest

ಸಂಜನಾ ಬೋಡು ತಲೆ ನೋಡಿ ಶಾಕ್ ಆದ ಅಭಿಮಾನಿಗಳು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ ರಾಣಿ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು, ಸಂಕಷ್ಟಗಳನ್ನು ಎದುರಿಸಿ ಇದೀಗ ಸುಂದರ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. 8 ತಿಂಗಳ ಗಭಿಣಿಯಾಗಿರುವ ಸಂಜನಾ ತಾಯ್ತನದ ಖುಷಿಯನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಸಂಜನಾ ತಮ್ಮ ಬೋಡು ತಲೆಯ ಫೋಟೊವನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಗರ್ಭಿಣಿ ಸಂಜನಾ ತಮ್ಮ ತಲೆ ಕೂದಲನ್ನು ದಾನ ಮಾಡಿದ್ದು, ಬೋಡುತಲೆಯ ಫೋಟೊವನ್ನು ಹಂಚಿಕೊಂಡಿದ್ದಾರೆ. ಹಲವು ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಸಂತೋಷದ ದಿನಗಳನ್ನು ಕಳೆಯುತ್ತಿರುವ ಸಂಜನಾ ದೇವರಲ್ಲಿನ ತಮ್ಮ ನಂಬಿಕೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೂದಲು ದಾನ ಮಾಡಿದ್ದಾಗಿ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಸಂಜನಾ, ಸೌಂದರ್ಯ ನೋಡುವವರ ದೃಷ್ಟಿಯಲ್ಲಿರುತ್ತದೆ. ದೇವರಲ್ಲಿ ನಾನು ಇಟ್ಟ ನಂಬಿಕೆ ಪೂರ್ಣಗೊಳಿಸಲು ನನ್ನ ಕೂದಲನ್ನು ದಾನ ಮಾಡಿದ್ದೇನೆ. ಸಾಕಷ್ಟು ಅಡೆತಡೆಗಳನ್ನು ಎದುರಿಸಿದ ನಂತರದಲ್ಲಿ ಜೀವನವು ಮತ್ತೆ ಸುಂದರವಾಗುತ್ತಿದೆ. ಇದಕ್ಕಾಗಿ ದೇವರಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರು ಸಾಲದು. ಜೈ ಶ್ರೀಕೃಷ್ಣ, ಅಹಮ್ ಬಹ್ಮಾಸ್ಮಿ ಎಂದು ಬರೆದುಕೊಂಡಿದ್ದಾರೆ.
ಹುಬ್ಬಳ್ಳಿ: SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಜೇನು ದಾಳಿ; ಹಲವರ ಸ್ಥಿತಿ ಗಂಭೀರ

Home add -Advt

Related Articles

Back to top button