Latest

 ಸಂಸ್ಕೃತ ಪ್ರತಿಭಾ​ ಪುರಸ್ಕಾರ ಮತ್ತು ಸನ್ಮಾನ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಾರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘ​o ಬೆಳಗಾವಿ ಘಟಕದ ವತಿಯಿಂದ ಎಸ್. ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಂಸ್ಕೃತ ವಿಷಯದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಯಶಸ್ಸನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ​ನಡೆಸಲಾಯಿತು.​ ಈ ಕಾರ್ಯಕ್ರಮದಲ್ಲಿ 72 ವಿದ್ಯಾರ್ಥಿಗಳು ಸನ್ಮಾನವನ್ನು ಸ್ವೀಕರಿಸಿದರು.

​ ಮುಖ್ಯ ಅತಿಥಿಗಳಾಗಿ ​ಉದ್ಯಮಿ ಚೈತನ್ಯ ಕುಲಕರ್ಣಿ ಆಗಮಿಸಿದ್ದರು. ಸಂಸ್ಕೃತವನ್ನು ಬೆಳೆಸಿ ಉಳಿಸಿಕೊಂಡು ಹೋಗಬೇಕಾಗಿದೆ. ಜಗತ್ತಿನ ಅತಿ ಪ್ರಾಚೀನ ಭಾಷೆ ಸಂಸ್ಕೃತವಾಗಿದೆ. ಸಂಸ್ಕೃತ ಅಧ್ಯಯನ ಮಾಡಲು ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಎಂದು​ ಅವರು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘದ ನಾರಾಯಣ ಭಟ್ ವಹಿಸಿ​, ​ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಲು ಸಂಸ್ಕೃತ ಹೆಚ್ಚಿನ ಅವಕಾಶ ನೀಡುತ್ತದೆ. ಎಲ್ಲರೂ ಸಂಸ್ಕೃತವನ್ನು ಓದ​ಬೇಕು. ಕಂಪ್ಯೂಟರ್ ಗೆ ಹತ್ತಿರವಾದ ಭಾಷೆ ಸಂಸ್ಕೃತವಾಗಿದೆ ಎಂದು ಹೇ​ಳಿದರು. 

ಇದೇ ಸಂದರ್ಭದಲ್ಲಿ ಸಂಸ್ಕೃತದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕರಾದ​  ಚಂದ್ರಶೇಖರ ಜೋಶಿ ಮತ್ತು ಸೂರ್ಯನಾರಾಯಣ ಭಟ್ ಇವರ​ನ್ನು ಸನ್ಮಾನಿಸಲಾಯಿತು.

​ ಚಿದಾನಂದ ಪಾಟೀಲ ಇವರು ಸಂಸ್ಕೃತ ಅಧ್ಯಯನದ ಅವಶ್ಯಕತೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.  ಟಿ. ಆರ್ ​. ಭಾಸ್ಕರಿ ಸ್ವಾಗತಿಸಿದರು. ಗೀತಾ ಸಿಂದಗಿ ಪರಿಚಯಿಸಿದರು.​ ರಾಮಚಂದ್ರ ಭಟ್ ಇವರು ಕಾರ್ಯಕ್ರಮವನ್ನು ಸಂಯೋಜಿಸಿ​,ನಿರೂಪಿಸಿದರು. ಎಮ್. ಎ ಹಿರೇಮಠ ವಂದಿಸಿದರು. ​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button