Wanted Tailor2
Cancer Hospital 2
Bottom Add. 3

ಕೇಂದ್ರದ ರಾಷ್ಟ್ರೀಯ ವಿಶೇಷ ಒಲಂಪಿಕ್ಸ್ ಪಾಲಕರ ಪ್ರತಿನಿಧಿಯಾಗಿ ಶಶಿಕಲಾ ಜೊಲ್ಲೆ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ನವದೆಹಲಿಯಲ್ಲಿ ಭಾರತದ ದಿವ್ಯಾಂಗ ಮಕ್ಕಳ ವಿಶೇಷ ಒಲಿಂಪಿಕ್ಸ್ ಭಾರತ್ ಇದರ ಎರಡನೇ ಬಾರಿಗೆ 2023-26 ಅವಧಿಗೆ ಅಧ್ಯಕ್ಷರಾಗಿ ಡಾ. ಮಲ್ಲಿಕಾ ನಡ್ಡಾ ಜಿ ಅವರು  ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಚಿತ್ರಾ ಶಹಾ ಮತ್ತು ಪವನ ಕುಮಾರ ಪಟೋಡಿಯಾ ಪ್ರಧಾನ ಕಾರ್ಯದರ್ಶಿ ಡಾ. ಡಿ.ಜಿ.ಚೌಧರಿ,ಮತ್ತು ಎಸ್‌.ಒ. ಭಾರತದ ಖಜಾಂಚಿಯಾಗಿ ಉಪಸನಾ ಅರೋರಾ ಅವರು ಆಯ್ಕೆಯಾಗಿದಕ್ಕೆ ಅವರನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ  ಶಶಿಕಲಾ ಜೊಲ್ಲೆಯವರು ಅಭಿನಂದಿಸಿದರು.

ಇದರ ಜೊತೆಗೆ ಕೇಂದ್ರದ ರಾಷ್ಟ್ರೀಯ ವಿಶೇಷ ಒಲಂಪಿಕ್ಸ್ ಪಾಲಕರ ಪ್ರತಿನಿಧಿಯಾಗಿ ಶಶಿಕಲಾ ಜೊಲ್ಲೆ ಆಯ್ಕೆಯಾಗಿದ್ದಾರೆ.

ಬಳಿಕ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶಶಿಕಲಾ ಜೊಲ್ಲೆ  ಮಾತನಾಡಿ ಭಾರತದಲ್ಲಿ ವಿಶೇಷ ಚೇತನ ಮಕ್ಕಳಿಗೆ ಅವಕಾಶ ಕೊಟ್ಟು, ಸ್ಪೆಷಲ್ ಒಲಿಪಿಂಕ್ಸ್ ಗೆ ತಯಾರು ಮಾಡುವ ಹಾಗೂ ನೊಂದಿರುವ ಮಕ್ಕಳ ಪಾಲಕರಿಗೆ ಧೈರ್ಯ ತುಂಬುವ  ಜವಾಬ್ದಾರಿ ನಮ್ಮದಾಗಿದೆ.

ಮಲ್ಲಿಕಾ ನಡ್ಡಾ ಜಿ, 30 ವರ್ಷಗಳಿಂದ ವಿಕಲಚೇತನರು, ಹಿಂದುಳಿದವರು ಮತ್ತು ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಸೇವೆ ಸಲ್ಲಿಸಿದ್ದಾರೆ. ಇತಿಹಾಸದಲ್ಲಿ ಡಾಕ್ಟರೇಟ್ ಹೊಂದಿರುವ ಶಿಕ್ಷಣತಜ್ಞರಾಗಿದ್ದಾರೆ.

ಅವರು ರಾಜೀವ ಗಾಂಧಿ ಮಾನವ ಸೇವಾ ಪುರಸ್ಕಾರ, ಮಹಿಳಾ ಮತ್ತು ಮಕ್ಕಳ ಸಚಿವಾಲಯ, ಭಾರತ ಸರ್ಕಾರದ ಮಕ್ಕಳ ಅಭಿವೃದ್ಧಿ ಕ್ಷೇತ್ರದಲ್ಲಿ  ಅಭಿವೃದ್ದಿ ಮಾಡಿ 2011 ರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಡೆರೋಜಿಯೊ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಸಮಾಜ ಸೇವೆ ನಮಗೆಲ್ಲ ಸ್ಪೂರ್ತಿದಾಯಕವಾಗಿದೆ.

Bottom Add3
Bottom Ad 2

You cannot copy content of this page