ವದಂತಿಗಳನ್ನು ತಳ್ಳಿ ಹಾಕಿದ ಸತೀಶ್ ಜಾರಕಿಹೊಳಿ; ಪುತ್ರಿ ಪ್ರಿಯಾಂಕ ಸ್ಪರ್ಧೆ ಬಗ್ಗೆಯೂ ಮಾಹಿತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈ ಬಾರಿ ಸವದತ್ತಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಲಿದ್ದಾರೆ. ಯಮಕನಮರಡಿ ಕ್ಷೇತ್ರಕ್ಕೆ ಪುತ್ರಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಲಿದ್ದಾರೆ ಎನ್ನುವ ದಟ್ಟ ವದಂತಿ ಜಿಲ್ಲೆಯಲ್ಲಿ ಹರಡಿತ್ತು.
ಆದರೆ ಈ ವದಂತಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಸತೀಶ್ ಜಾರಕಿಹೊಳಿ ನಾನು ಯಮಕನಮರಡಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರೆ. ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಅವರು, ಯಮಕನಮರಡಿ ಕ್ಷೇತ್ರದ ಟಿಕೆಟ್ ಕೋರಿ ಈಗಾಗಲೆ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಈ ಬಾರಿ ಮಗಳನ್ನು ಚುನಾವಣೆ ಕಣಕ್ಕಿಳಿಸುವುದಿಲ್ಲ ಎಂದೂ ಅವರು ತಿಳಿಸಿದರು. ಸವದತ್ತಿ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ಸ್ಪರ್ಧಿಸಲಿದ್ದಾರೆ ಎನ್ನುವ ಕುರಿತು ಸುದ್ದಿ ಹರಡಿತ್ತು. ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಇನ್ನೂ ಚುನಾವಣೆಗೆ ನಿಲ್ಲಲು ಅರ್ಹನಾಗಿಲ್ಲ. ಹಾಗಾಗಿ ಪುತ್ರಿಯನ್ನು ಯಮಕನಮರಡಿ ಕ್ಷೇತ್ರದಿಂದ ಕಣಕ್ಕಿಳಿಸಬೇಕೆಂದು ಸತೀಶ್ ಯೋಚಿಸಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಸತೀಶ್ ಈ ವದಂತಿಗೆ ಪೂರ್ಣವಿರಾಮ ಇಟ್ಟಿದ್ದಾರೆ.
ಯಮನಕಮರಡಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
https://pragati.taskdun.com/satish-jarakiholiyamakana-maradiswatantra-collage/
ಸ್ವ ಪಕ್ಷಗಳಲ್ಲಿ ಮೂವರಿಗೂ ಅವಮಾನ: ಜಾರಕಿಹೊಳಿ ಸಹೋದರರನ್ನು ಜೆಡಿಎಸ್ ಗೆ ಆಹ್ವಾನಿಸಿದ ಕುಮಾರಸ್ವಾಮಿ?
https://pragati.taskdun.com/shame-to-all-three-in-their-parties-kumaraswamy-invited-jarakiholi-brothers-to-jds/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ