ಪ್ರಗತಿವಾಹಿನಿ ಸುದ್ದಿ; ಗೋಕಾಕ: ರಾಜ್ಯದಲ್ಲಿ ಕೋವಿಡ್ ಸಮಸ್ಯೆ, ಪ್ರವಾಹ ಪರಿಸ್ಥಿತಿ ಇದೆ. ಆದ ಕಾರಣ ಆದಷ್ಟು ಬೇಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಚಿವ ಸಂಪುಟ ರಚನೆ ಮಾಡಬೇಕು ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯಿಸಿದರು.
ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ರಾಜ್ಯದಲ್ಲಿ ಕೋವಿಡ್ ಸಮಸ್ಯೆ ಹಾಗೂ ಪ್ರವಾಹದಿಂದ ಜನರಿಗೆ ಹಾನಿಯಾಗಿದೆ. ಜನರ ಸಮಸ್ಯೆಗಳನ್ನು ಆಲಿಸಲು ಮಂತ್ರಿಗಳು ಬೇಕು. ಆದ ಕಾರಣ ಬೇಗ ಸಚಿವ ಸಂಪುಟ ರಚನೆ ಮಾಡಬೇಕು’ ಎಂದರು.
‘ಮುಖ್ಯಮಂತ್ರಿಗಳ ಒಬ್ಬರ ಮೇಲೆ ಅಧಿಕಾರ ನಡೆಸುವುದು ಕಷ್ಟ. ಸಿಎಂ ಬಸವರಾಜ ಬೊಮ್ಮಾಯಿ ಅವರು ಒಂದು ವಾರದೊಳಗೆ ಸಂಪುಟ ರಚನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಇದರಿಂದ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಲಿದ್ದಾವೆ. ಆದ್ದರಿಂದ ಆದಷ್ಟು ಬೇಗ ಸಂಪುಟ ರಚನೆ ಮಾಬೇಕು’ ಎಂದು ಹೇಳಿದರು.
ಲೋಳಸೂರ ಸೇತುವೆ : ಲೋಳಸೂರ ಸೇತುವೆ ರಸ್ತೆ ಪ್ರವಾಹದಿಂದ ಹಾಳಾಗಿದೆ. ಅದರ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಅದು ಪೂರ್ಣ ಕಾಮಗಾರಿ ಆಗಬೇಕಾದರೆ ಸಮಯ ತೆಗೆದುಕೊಳ್ಳಲಿದೆ. ಅಲ್ಲಿಯವರೆಗೆ ಕೆಳಗೆ ಇರುವ ರಸ್ತೆ ತಾತ್ಕಾಲಿಕ ಕಾಮಗಾರಿ ನಡೆಸಿ, ಪರ್ಯಾಯವಾಗಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಪ್ರತಿ ವರ್ಷ ಲೋಳಸೂರ ಸೇತುವೆಯಲ್ಲಿ ಈ ಸಮಸ್ಯೆಯಾಗುತ್ತಿದೆ. ಆದ ಕಾರಣ 6 ತಿಂಗಳ ಹಿಂದೆಯೇ 30 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಲಾಗಿದೆ. ಸರ್ಕಾರ ಅನುಮೊದನೆ ಮಾಡಿದ್ರೆ, ರಸ್ತೆಯನ್ನು ಎತ್ತರಕ್ಕೆ ನಿರ್ಮಾಣ ಮಾಡುವ ಮೂಲಕ ಶಾಶ್ವತ ಪರಿಹಾರ ಮಾಡಿದಂತಾಗುತ್ತದೆ. ಮಳೆ ಕಡಿಮೆ ಆದ ಮೇಲೆ ಕೆಳಗಡೆ ರಸ್ತೆಯಲ್ಲಿ ದೊಡ್ಡ ವಾಹನ, ಮೇಲೆ ಸಣ್ಣ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದಿದ್ದಾರೆ.
ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ