ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧ ಬಳಿ ಮರಾಠ ಸಮುದಾಯದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭಾಷಣ ಮಾಡಲು ಮುಂದಾಗುತ್ತಿದ್ದಂತೆ ಪ್ರತಿಭಟನಾಕಾರರು ಅಡ್ಡಿ ಪಡಿಸಿದ ಘಟನೆ ನಡೆದಿದೆ.
ಹಿಂದೂ ಪದ, ಸಂಬಾಜಿ ಮಹಾರಾಜ್ ಬಗ್ಗೆ ಹೇಳಿಕೆ ನೀಡಿದ್ದ ಸತೀಶ್ ಜಾರಕಿಹೊಳಿಗೆ ಭಾಶಣ ಮಾಡಲು ಅವಕಾಶ ಕೊಡದೇ ಶಿವಾಜಿ ಪರ ಘೋಷಣೆ, ಹರ್ ಹರ್ ಮಹಾದೇವ್, ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಲಾಯಿತು. ಈ ವೇಳೆ ಪ್ರತಿಭಟನಾಕಾರರನ್ನು ಮನವೊಲಿಸಲು ಸತೀಶ್ ಜಾರಕಿಹೊಳಿ ಯತ್ನಿಸಿದರೂ ಸಾಧ್ಯವಾಗಲಿಲ್ಲ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ನಾನು ಸಮುದಾಯದ ಬೇಡಿಕೆ ಸಂಬಂಧ ಪ್ರತಿಭಟನೆಗೆ ಬೆಂಬಲ ಕೊಡಲು ಬಂದಿದ್ದೇನೆ. ಯಾರೋ ವಿರೋಧಿಗಳು ಈ ರೀತಿ ಮಾಡುತ್ತಿದ್ದಾರೆ. ಇದು ಬಿಜೆಪಿ ಕೆಲಸವಿರಬಹುದು. ನನ್ನ ಬೆಂಬಲ ಸಮುದಾಯಕ್ಕೆ ಇರುತ್ತದೆ. ನಾನು ಯಾರಿಗೂ ಅವಮಾನ ಆಗುವಂತೆ ಮಾತನಾಡಿಲ್ಲ. ಈ ಬಗ್ಗೆ ರೆಕಾರ್ಡ್ ಗಳು ಇವೆ. ಅವರಿಗೆ ಮಾಹಿತಿ ಇಲ್ಲ ಅನಿಸುತ್ತದೆ ಎಂದು ಹೇಳಿದರು.
*ಅವರ ಭಾವನೆ ನನಗೆ ಅರ್ಥವಾಗಿದೆ ಎಂದ ಸಿಎಂ*
https://pragati.taskdun.com/cm-basavaraj-bommaik-s-eshwarapparamesh-jarakiholireaction/
ಕಾಗೇರಿ, ಬೊಮ್ಮಾಯಿ ಗಮನಕ್ಕೆ: ಬೆಳಗಾವಿ ಚರ್ಚೆ ಮೊದಲಿಗೆ ಬರಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ