Kannada NewsLatest

ಇಬ್ಬರೂ ಟೈಂ ಪಾಸ್ ಮಾಡ್ತಿದ್ದಾರೆ; ಬರಿ ಟುಸ್ ಬಾಂಬ್ ಅಷ್ಟೇ; ಸತೀಶ್ ಜಾರಕಿಹೊಳಿ ವ್ಯಂಗ್ಯ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಜೆಪಿಯಲ್ಲಿ ಈಗಾಗಲೇ 120 ಸೀಟು ಹೌಸ್ ಫುಲ್ ಆಗಿದೆ. ಇನ್ನೂ 16 ಶಾಸಕರನ್ನು ಎಲ್ಲಿ ಕುಳಿಸಿಕೊಳ್ತೀರಿ? ರಮೇಶ್ ಜಾರಕಿಹೊಳಿ, ಲಖನ್ ಇಬ್ಬರೂ ಟೈಂ ಪಾಸ್ ಮಾಡ್ತಿದ್ದಾರೆ ಎಂದು ಶಾಸಕ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಇಬ್ಬರೂ ರಾಜಕೀಯ ವ್ಯಾಪಾರ ಮಾಡುತ್ತಿದ್ದಾರೆ. ದಿನಕ್ಕೊಂದು ಬಾಂಬ್ ಸಿಡಿಸುತ್ತಾ ಟೈಂ ಪಾಸ್ ಮಾಡ್ತಿದ್ದಾರೆ. ಕೆಲ ಬಾಂಬ್ ಸಿಡಿಯುತ್ತೆ. ಮತ್ತೆ ಕೆಲವು ಟುಸ್ ಆಗುತ್ತೆ. ಇವರು ಬಾಂಬ್ ಸಿಡಿಸುತ್ತಾರೆ ಎಂದು ಕಿವಿ ಮುಚ್ಚಿಕೊಳ್ಳಬೇಕು ಅಷ್ಟೇ ಎಂದರು.

ರಮೇಶ್ ಜಾರಕಿಹೊಳಿ ಅಂದು ಕಾಂಗ್ರೆಸ್ ನ 16 ಜನ ನನ್ನ ಸಂಪರ್ಕದಲ್ಲಿ ಇದ್ದಾರೆ ಬಿಜೆಪಿಗೆ ಕರೆ ತರುತ್ತೇನೆ ಅಂದ್ರು. ಇಂದು ಲಖನ್ 16 ಅಲ್ಲ 20 ಜನರನ್ನು ಬೇಕಾದರೂ ತರುವ ಶಕ್ತಿ ಇದೆ ಎಂದಿದ್ದಾರೆ. ಈಗಾಗಲೆ ಬಿಜೆಪಿಯಲ್ಲಿ 120 ಸೀಟ್ ಹೌಸ್ ಫುಲ್ ಆಗಿದೆ. ಇನ್ನೂ 16 ಜನರನ್ನು ಎಲ್ಲಿ ಕುಳಿಸ್ತೀರಿ? ಟಾಪ್ ಮೇಲಾ? ಕೆಳಗಾ? ಡಿಕ್ಕಿಯಲ್ಲಾ? ಇವರ ಬಾಂಬ್ ಗಳು ಟುಸ್ ಆಗುತ್ತೆ ಅಷ್ಟೇ. ಯಾರೂ ಪಕ್ಷ ಬಿಟ್ಟು ಬಿಜೆಪಿಗೆ ಹೋಗಲ್ಲ ಎಂದು ಹೇಳಿದರು.

ಸಹೋದರರಿಬ್ಬರೂ ಸಮಾಜ ಸೇವೆ ಮಾಡ್ತಿಲ್ಲ, ಕಾಲಹರಣ ಮಾಡ್ತಿದ್ದಾರೆ. ಆರು ತಿಂಗಳಿಗೊಮ್ಮೆ ಪಕ್ಷಾಂತರ ನಾಟಕವಾಡ್ತಿದ್ದಾರೆ. ಬಿಜೆಪಿಗೆ ಹೋಗ್ತಿವಿ ಅಂತಾ ಕಾಂಗ್ರೆಸ್ ಗೆ ಕಾಂಗ್ರೆಸ್ ಗೆ ಹೋಗ್ತೀವಿ ಅಂತಾ ಬಿಜೆಪಿಗೆ ಬ್ಲ್ಯಾಕ್ ಮೇಲ್ ಮಾಡುವ ಕೆಲಸ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಡಿಕೆಶಿ ಸಂಪರ್ಕದಲ್ಲಿ ಲಕ್ಷ್ಮಣ ಸವದಿ; ಹೊಸ ಬಾಂಬ್ ಸಿಡಿಸಿದ ಲಖನ್ ಜಾರಕಿಹೊಳಿ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button