
ಪ್ರಗತಿವಾಹಿನಿ ಸುದ್ದಿ; ರಾಯಬಾಗ: ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರು ಸೋಮವಾರ ರಾಯಬಾಗ ಪಟ್ಟಣಕ್ಕೆ ಆಗಮಿಸಲಿದ್ದು ಬೆಳಿಗ್ಗೆ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ (ಕೆ ಡಿ ಪಿ )ಸಭೆ ನಡೆಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಪ್ರಥಮ ಬಾರಿ ರಾಯಬಾಗ ಪಟ್ಟಣಕ್ಕೆ ಸತೀಶ್ ಜಾರಕಿಹೊಳಿ ಆಗಮಿಸುತ್ತಿದ್ದಾರೆ. ಪಟ್ಟಣದ ಚಿಂಚಲಿ ರಸ್ತೆಯಲ್ಲಿರುವ ನೂತನ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟನೆ ಮಾಡಲಿದ್ದಾರೆ. ನಂತರ ಸಾಯಂಕಾಲ 4 ಘಂಟೆಗೆ ಮಹಾವೀರ ಭವನದಲ್ಲಿ ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಂದ ಏರ್ಪಡಿಸಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ನಗರ ಅಧ್ಯಕ್ಷ ಹಾಜಿ ಮುಲ್ಲಾ ತಿಳಿಸಿದ್ದಾರೆ.
ನಂತರ ಮಾತನಾಡಿದ ಕೆ ಪಿ ಸಿ ಸಿ ಸದಸ್ಯರಾದ ದಿಲೀಪ್ ಜಮಾದಾರರವರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬರಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗಣೇಶ ಮೋಹಿತೆ,ಅಪ್ಪಾಸಾಬ ಕುಲಗುಡೆ, ಈರಪ್ಪ ನಿಂಗನೂರೆ,ಇನ್ನುಸ ಅತ್ತಾರ, ಅರ್ಬಾಜ್ ಮುಲ್ಲಾ, ಕಾದೇಶ ಐಹೊಳೆ, ಫಾರೂಕ್ ಮೊಮಿನ, ನಾಮದೇವ್ ಕಾಂಬಳೆ, ಅರ್ಜುನ್ ಭಂಡಗರ, ಕಿರಣ ಕಾಂಬಳೆ, ಸುರೇಶ ತೊಳೆ, ಶ್ರವಣ್ ಕಾಂಬಳೆ, ಸುಲ್ತಾನ ಪೂಜೇರಿ, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ