Kannada NewsLatest

*ಪ್ರತಿಬಾರಿ ಆಪರೇಷನ್ ಕಮಲ ಸಕ್ಸಸ್ ಆಗಲ್ಲ; ಬಿಜೆಪಿಗೆ ಟಾಂಗ್ ನೀಡಿದ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಈ ಬಾರಿ ಬಿಜೆಪಿ ಆಪರೇಷನ್ ಕಮಲ ಮಾಡುವುದು ಹಗಲು ಕನಸು. ಪ್ರತಿಬಾರಿ ಆಪರೆಶನ್ ಕಮಲ ಸಕ್ಸಸ್ ಆಗಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಮ್ಮ ಲೆಕ್ಕದ ಪ್ರಕಾರ ನಮಗೆ ಬಹುಮತದ ಕೊರತೆಯಾಗಲ್ಲ. ಯಾರು ಏನೆ ಮಾಡಿದ್ರೂ ರಾಜ್ಯದ ಜನ ಕಾಂಗ್ರೆಸ್ ಪರ ಇದ್ದಾರೆ ಎಂದರು.

ಮೈತ್ರಿಗೆ ಸಿದ್ಧವಿರುವುದಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಗೆ ಬಹುಮತದ ಕೊರತೆ ಆಗಲ್ಲ, ಆದರೂ ಅವರು ಬೆಂಬಲಿಸಿದರೆ ಇನ್ನೂ ಒಳ್ಳೆಯ ಸರ್ಕಾರ ನೀಡುತ್ತೇವೆ. ದೇವೇಗೌಡರ ಹಾಗೂ ಕುಮಾರಸ್ವಾಮಿಯವರ ಸಲಹೆ ಇದ್ದರೆ ಒಳ್ಳೆಯದೇ. ಒಂದು ವೇಳೆ ಸರ್ಕಾರ ರಚನೆಯಲ್ಲಿ ಜೆಡಿಎಸ್ ಪಾತ್ರ ನಿರ್ಣಯ ಆಗಬಹುದು ಹೊರತು ಬಿಜೆಪಿಯದ್ದಲ್ಲ ಎಂದರು.

ಈ ಬಾರಿ ಆಪರೇಷನ್ ಕಮಲ ಅನ್ನುವುದು ಹಗಲು ಕನಸು. ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಅತಂತ್ರ ಫಲಿತಾಂಶ ಬರುವುದಿಲ್ಲ ಎಂದು ಹೇಳಿದರು.

Home add -Advt
https://pragati.taskdun.com/cm-basavaraj-bommaireactionelection-result-2/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button