Belagavi NewsBelgaum NewsKannada NewsKarnataka NewsLatest

*ಬೆಳಗಾವಿ: ನಾಲ್ಕನೇ ಮಹಡಿಯಿಂದ ಬಿದ್ದು ಯುವತಿ ದುರಂತ ಸಾವು*

ಪ್ರಗತಿವಾಹಿನಿ ಸುದ್ದಿ: ಯುವತಿಯೊಬ್ಬಳು ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ನಗರದ ಸದಾಶಿವನಗರದಲ್ಲಿ ನಡೆದಿದೆ.

ಓಶಾನಾ ರೊನಾಲ್ದೋ ಪಚೆಕೊ (೨೧) ಮೃತ ಯುವತಿ. ಸಾಕುನಾಯಿಯನ್ನು ತೆಗೆದುಕೊಂಡು ಮಹಡಿ ಮೇಲೆ ಹತ್ತಿದ್ದ ಯುವತಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.

Home add -Advt

ಓಂ ರೆಸಿಡೆನ್ಸಿ ಅಪಾರ್ಟ್ ಮೆಂಟ್ ನಲ್ಲಿ ಈ ದುರಂತ ಸಂಭವಿಸಿದೆ. ಸಹೋದರನ ಕಣ್ಣೆದುರೆ ಈ ದುರಂತ ಸಂಭವಿಸಿದೆ. ಸಹೋದರ ಲಿಯಾನ್ ಅಪಾರ್ಟ್ ಮೆಂಟ್ ಗೆ ಆಗಮಿಸುತ್ತಿದ್ದ ವೇಳೆ ಸಹೋದರಿ ಓಶಿನಾ ಸಾಕುನಾಯಿಯನ್ನು ಎತ್ತಿಕೊಂಡು ಟೆರೆಸ್ ಗೆ ಹೋಗಿದ್ದಳು. ಈ ವೇಳೆ ಆಯತಪ್ಪಿ ಬಿದ್ದಿದ್ದಾಳೆ.

ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button