Kannada NewsLatest

*ಬೆಳಗಾವಿ: ಕಲಾಪದ ಆರಂಭದಲ್ಲೇ ಕಿಚ್ಚು ಹೊತ್ತಲಿದೆಯಾ ಸಾವರ್ಕರ್ ಫೋಟೋ ಸಮರ?*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಸೋಮವಾರದಿಂದ ನಡೆಯಲಿರುವ ಚಳಿಗಾಲದ ಅಧಿವೇಶನದ ಮೊದಲ ದಿನವೇ ಸಾವರ್ಕರ್ ಭಾವಚಿತ್ರ ವಿವಾದ ಆಡಳಿತ ಹಾಗೂ ವಿಪಕ್ಷ ನಾಯಕರ ಸಂಘರ್ಷಕ್ಕೆ ವೇದಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಸುವರ್ಣವಿಧಾನಸೌಧದಲ್ಲಿ ಸಾವರ್ಕರ್ ಫೋಟೋ ಅನಾವರಣಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಕಲಾಪದ ಕೊಠಡಿಯಲ್ಲಿ ಸಾವರ್ಕರ್ ಫೋಟೋ ಅಳವಡಿಸಲಾಗಿದೆ. ನಾಳೆ ಕಲಾಪ ಆರಂಭವಾಗುತ್ತಿದ್ದಂತೆ ಭಾವಚಿತ್ರ ಅನಾವರಣಗೊಳ್ಳಲಿದೆ ಎಂದು ತಿಳಿದುಬಂದಿದೆ.

ಸಾವರ್ಕರ್ ಭಾವಚಿತ್ರ ಅನಾವರಣಕ್ಕೆ ಈಗಾಗಲೇ ಕಾಂಗ್ರೆಸ್ ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಿದೆ. ಒಂದು ವೇಳೆ ಅಧಿವೇಶನದ ಸಂದರ್ಭದಲ್ಲಿ ಸಾವರ್ಕರ್ ಭಾವಚಿತ್ರ ಅನಾವರಣಗೊಂಡರೆ ಅಧಿವೇಶನದ ಮೊದಲ ದಿನವೇ ಸದನದಲ್ಲಿ ಕಿಚ್ಚು ಹೊತ್ತಲಿದ್ದು, ಕಲಾಪದ ಆರಂಭದಲ್ಲೇ ಕೋಲಾಹಲವುಂಟಾಗುವ ಸಾಧ್ಯತೆ ಇದೆ.

ಸುವರ್ಣವಿಧಾನಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅನಾವರಣ ವಿಚಾರವಾಗಿ ಬಾಗಲಕೋಟೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಾವರ್ಕರ್ ಗೂ ಕರ್ನಾಟಕಕ್ಕೂ ಏನು ಸಂಬಂಧ? ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್ ಫೋಟೋ ಹಾಕಲು ಆಗಲ್ಲ. ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರ ಹಾಕಿದ್ದೀವಿ. ಇವರ ಫೋಟೋ ಅನಾವರಣ ಮಾಡುತ್ತೇವೆ . ಫೋಟೋ ಅನಾವರಣಕ್ಕೆ ಬರಬೇಕು ಎಂದು ನನಗೂ ಖುದ್ದು ಸ್ಪೀಕರ್ ಕಚೇರಿಂದ ಆಹ್ವಾನ ಬಂದಿದೆ. ಆದರೆ ಸಾವರ್ಕರ್ ಫೋಟೋ ಬಗ್ಗೆ ಹೇಳಿಲ್ಲ. ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್ ಫೋಟೋ ಹಾಕಲು ಆಗಲ್ಲ ಎಂದು ಕಿಡಿಕಾರಿದ್ದಾರೆ.

*ಬೆಳಗಾವಿ ಅಧಿವೇಶನ: ಸರ್ಕಾರಕ್ಕೆ ತಟ್ಟಲಿದೆ ಪ್ರತಿಭಟನೆಗಳ ಬಿಸಿ*

https://pragati.taskdun.com/belagavi-sessionprotestpolice-security/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button