Latest

ಶಿಕ್ಷಕಿ ಅಶ್ವಿನಿ ಅಂಗಡಿ ಅವರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗುಳೇದಗುಡ್ಡ ತಾಲೂಕಿನ ರಾಘಾಪುರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ, ಸಾಹಿತಿ ಅಶ್ವಿನಿ ಅಂಗಡಿ ಅವರಿಗೆ ದೆಹಲಿಯ ಅಖಿಲ ಭಾರತ ದಲಿತ ಸಾಹಿತ್ಯ ಅಕಾಡೆಮಿ ಕರ್ನಾಟಕ ಘಟಕ ನೀಡುವ ಪ್ರಸಕ್ತ ಸಾಲಿನ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಲಾಗಿದೆ.

ಇಲ್ಲಿನ ಸವಾಯಿ ಗಂಧರ್ವ ಸಾಹಿತ್ಯ ಭವನದಲ್ಲಿ ಭಾನುವಾರ ಜರುಗಿದ ದಲಿತ ಸಾಹಿತಿಗಳು ಹಾಗೂ ಚಿಂತಕರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅಖಿಲ ಭಾರತ ದಲಿತ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಸ್. ಪಿ.ಸುಮನಾಕ್ಷರ ಅವರು ಅಶ್ವಿನಿ ಅಂಗಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಸತೀಶ ಜಾರಕಿಹೊಳಿ ಮುಖ್ಯ ಅತಿಥಿಯಾಗಿಭಾಗವಹಿಸಿದ್ದರು. ಭೂತರಾಮನಹಟ್ಟಿಯ ವಿರಕ್ತಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಬಿಡಿಎಸ್ ಎ ರಾಷ್ಟ್ರೀಯ ಸಂಯೋಜಕ ಸುಭಾಷ್ ಕಾನಡೆ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ.ಸಿ.ವೆಂಕಟೇಶ್, ಚಲುವರಾಜು, ಡಾ. ಎಂ. ರಾಮಚಂದ್ರಪ್ಪ, ಬಿಡಿಎಸ್ ಎ ರಾಜ್ಯ ಘಟಕದ ಅಧ್ಯಕ್ಷ ಎಚ್. ಎಂ.ಕುಂದರಗಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಧುಮಾಳ ಮತ್ತಿತರರು ಉಪಸ್ಥಿತರಿದ್ದರು.

Home add -Advt

ನಿತೀಶ್ ಕುಮಾರ್ ಗೆ ಬಿಜೆಪಿ ಟೂ..ಟೂ..

https://pragati.taskdun.com/bihar-bjp-adopts-resolution-to-never-align-with-cm-nitish-kumar/

*ಡಿ.ಕೆ.ಶಿವಕುಮಾರ್ ವಿರುದ್ಧ ಆಡಿಯೋ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ*

https://pragati.taskdun.com/d-k-shivakumaraudio-releaseramesh-jarakiholibelagavi/

*ಆಡಿಯೋ, ದಾಖಲೆಗಳಿವೆ, 20 ಸಿಡಿಗಳಿವೆ ಎನ್ನುತ್ತಲೇ ಯಾವುದನ್ನೂ ಬಿಡುಗಡೆ ಮಾಡಲ್ಲ ಎಂದ ರಮೇಶ್ ಜಾರಕಿಹೊಳಿ*

https://pragati.taskdun.com/ramesh-jarakiholid-k-shivakumarpressmeet/

Related Articles

Back to top button